ವಿಜಯಪೂರ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ನಾಮಕರಣ ಸ್ವಾಗತಾರ್ಹ: ಶೀಲವಂತ ಉಮರಾಣಿ.
ಇಂಡಿ:ವಿಜಯಪೂರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಎಟಿಆರ್ -೭೨ ಮಾದರಿ ವಿಮಾನ ನಿಲ್ದಾಣವನ್ನು ಈಗ ಮೇಲ್ದರ್ಜೆಗೇರಿಸಿ, ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ, ಜಲಸಂಪನ್ಮೋಲ ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಮತ್ತು ಎಲ್ಲ ಸಚಿವ ಸಂಪುಟ ಸದಸ್ಯರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುವು ದಾಗಿ ರಾಜ್ಯ ಕರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಹೇಳಿದರು.
ವಿಜಯಪೂರ ವಿಮಾನ ನಿಲ್ದಾಣಕ್ಕೆ ೧೨ನೇ ಶತಮಾನದ ಕ್ರಾಂತಿಯೋಗಿ ಜಗಜ್ಯೋತಿ ಬಸವೇಶ್ವರರ ಹೆಸರು ಇರಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸ್ವಾಗತಾರ್ಹ.
ತಮ್ಮ ವಚನಗಳ ಮೂಲಕ ಸಾಮಾಜಿಕ ಶೋಷಣೆ ವಿರುಧ್ಧ ಸಿಡಿದೇದ್ದು ಸಮಸಮಾಜ ನಿರ್ಮಾಣ ಮಾಡಲು ಜಗತ್ತಿಗೆ ಸಮಾನತೆ ಸಾರಿದ ಬಸವೇಶ್ವರ ನಾಮಕರಣ ಅರ್ಥ ಪೂರ್ಣವಾಗಿದೆ ಇಂತಹ ಧಿಟ್ಟ ನಿರ್ಧಾರ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು.