ಶಿಥಿಲಾವಸ್ಥೆಗೆ ತಲುಪಿರುವ ನೀರು ಸಂಗ್ರಹ ಘಟಕ: ಅಪಾಯಕ್ಕೆ ಆಹ್ವಾನ
ಕೊಲ್ಹಾರ:ತಾಲ್ಲೂಕಿನ ರೋಣಿಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳದಗೆಣ್ಣೂರ ಗ್ರಾಮದಲ್ಲಿ ಗ್ರಾಮದ ಜನರಿಗಾಗಿ ನಿರ್ಮಿಸಿರುವ ನೀರು ಸಂಗ್ರಹ ಘಟಕ ಶಿಥಿಲಾವಸ್ಥೆಗೆ ತಲುಪಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ನೀರು ಸಂಗ್ರಹ ಘಟಕ ಬಿರುಕು ಬಿಟ್ಟಿದ್ದು, ಘಟಕವನ್ನು ಹೊತ್ತು ನಿಂತಿರುವ ಕಂಬಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ, ನೀರು ಸಂಗ್ರಹ ಘಟಕ ಹೊಂದಿಕೊಂಡಂತೆ ರಸ್ತೆ ಇದ್ದು ಅದೆ ಮಾರ್ಗದಲ್ಲಿ ಗ್ರಾಮಸ್ಥರು ಸಂಚರಿಸುತ್ತಾರೆ ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಸಾರ್ವಜನಿಕರು ಸಂಚರಿಸುವಾಗ ನೀರು ಸಂಗ್ರಹ ಘಟಕ ಕುಸಿದರೆ ಅನಾಹುತವಾಗುವ ಸಂಭವವುಂಟು ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಈ ಬಗ್ಗೆ ಗಮನಹರಿಸಬೇಕು ಆದಷ್ಟು ಬೇಗ ಘಟಕ ಮರುನಿರ್ಮಾಣಕ್ಕೆ ಪ್ರಯತ್ನಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
*
ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದುಶ್ರೀಶೈಲ ಗಜಂಡಿಮಠ.ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ರೋಣಿಹಾಳ