ಕೃಷಿ ಪ್ರಧಾನ ದೇಶವಾಗಿದ್ದು ರೈತ ಈ ದೇಶದ ಬೆನ್ನೆಲುಬು
ಇಂಡಿ:ಭಾರತ ದೇಶ ಶೇ.೮೫ ರಷ್ಟು ಕೃಷಿ ಪ್ರಧಾನ ದೇಶವಾಗಿದ್ದು ರ‍್ಯತ ಈ ದೇಶದ ಬೆನ್ನೆಲುಬು ರೈತ ಸುಖ, ಜೀವನ ಸಾಗಿಸಿದರೆ ಮಾತ್ರ ದೇಶ ಆರ್ಥಿಕ ಅಭಿವೃದ್ದಿ ಆದಂತಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಮರಗೂರ ಗ್ರಾಮದ ರಾಷ್ಟಿçÃಯ ಹೆದ್ದಾರಿ ಸಮೀಪ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ೨೦೨೨-೨೩ನೇ ಸಾಲಿನ ಪ್ರಸಕ್ತ ಹಂಗಾಮಿನ ಮೌಳಿ ಪೂಜೆ ಹಾಗೂ ಕಬ್ಬು ಬೆಳೆಗಾರರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೈಜವಾನ.ಜೈಕಿಸಾನ್ ಮೂಲ ಮಂತ್ರವಾಗಿದ್ದು ಇಬ್ಬರು ಕೂಡಾ ದೇಶ ಆಸ್ತಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಅಭಿವೃದ್ದಿಗೆ ರೈತರ ಸಹಕಾರ ಮುಖ್ಯ ದೇಶದಲ್ಲಿಯೇ ಅತೀ ಹೆಚ್ಚು ಇಳುವರಿ ಬೆಳೆಯುವ ರಾಜ್ಯ ಮಹಾರಾಷ್ಟçವಾಗಿದೆ.
ಮಹಾರಾಷ್ಟç ಕಾಗಲ್ ಸಕ್ಕರೆ ಕಾರ್ಖಾನೆ ಸಾಹುಮಾರಾಜರ ವಂಶಸ್ಥರಿ0ದ ಸ್ಥಾಪಿತ ವಾಗಿದ್ದು ಅ ಭಾಗದ ರೈತರು ಗುಣಮಟ್ಟದ ಇಳುವರಿ ಕಬ್ಬು ಕಾರ್ಖಾನೆಗೆ ಕಳಿಸುತ್ತಿರುವು ದರಿಂದ ಉನ್ನತಮಟ್ಟ ದಲ್ಲಿದೆ.
ಆದೇ ರೀತಿ ಈ ಭಾಗದ ರೈತರೂ ಕೂಡಾ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನನ್ನ ಆಸ್ತಿಯಲ್ಲ ಇದು ರೈತರ ಸ್ವತ್ತು ಇದರ ಉಳಿವು ನಿಮ್ಮೇಲ್ಲರದಾಗಿದೆ. ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಕೇವಲ ನನ್ನಿಂದ ಎನ್ನುವುದಕ್ಕಿಂತ ಯೋಗಾ ಯೋಗಾ ನಮ್ಮ ಪೂರ್ವಜನರ ಕನಸು ಇತ್ತು ಸಮಯ ಕೂಡಿ ಬಂದಿದೆ ಭಗವಂತ ಯಾವದೋ ಒಂದು ರೂಪದಲ್ಲಿ ನಿರ್ಮಾಣ ವಾಗಿದೆ ವಿನಹ: ನನ್ನಿಂದಲೇ ಎಂಬುದು ಅಹಂ ಬೇಡ.
ಯಾವುದೇ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪ್ರಮಾಣಿಕತೆ ಮುಖ್ಯ ರೈತರು ದೇವರ ಸಮಾನ ರೈತರು ಕಷ್ಟ ನಷ್ಟ ಅನುಭವಿಸಿ ಕಬ್ಬು ಬೆಳೆಯುತ್ತಾರೆ ತೂಕದಲ್ಲಿ ಕೂಡಾ ಮೋಸವಾಗದಂತೆ ಕ್ರಮಕೈಗೊಳ್ಳಲಾಗಿದೆ ಇವರಿಗೆ ಅನ್ಯಾಯ ಮಾಡಿದರೆ ಭಗವಂತ ಕ್ಷಮಿಸು ವುದಿಲ್ಲಎಂಬ ಅರಿವು ನನಗಿದೆ.ಪೂಜ್ಯರ ಪಾದ ಸಾಕ್ಷಿಯಾಗಿ ಕಾರ್ಖಾನೆಯ ಒಂದು ಪೈಸಾ ಲೋಪವಾಗದಂತೆ ನೋಡಿ ಕೊಂಡಿರುವೆ.
ನಾನು ಕಾರ್ಖಾನೆಯಲ್ಲಿರುವವರೆಗೂ ಇರುತ್ತೇನೆ ಒಂದು ಕಡ್ಡಿ ಅಲುಗಾಡಿಸಲು ಬಿಡುವುದಿಲ್ಲ. ಮುಂದಿನವರೂ ಕೂಡಾ ಕಾರ್ಖಾನೆ ಜವಾಬ್ದಾರಿಯಿಂದ ನಡೆಸಬೇಕು.ಈ ಕಾರ್ಖಾನೆ ಸ್ಥಾಪಿಸಲು ನನ್ನ ದೇಹದ ಒಂದು ಅ0ಗ ಕಳೆದುಕೊಂಡಿರುವೆ ಈ ಕಾರ್ಖಾನೆಯಲ್ಲಿ ರಾಜಕಾರಣ ,ಜಾತಿ ಬರಬಾರದು ಇಲ್ಲಿ ಇರುವದು ಒಂದೇ ಜಾತಿ ರೈತ ಎಂಬುದು ತಿಳಿಯಬೇಕು ದುಡ್ಡಿನಿಂದ ಶಾಂತಿ,ಗೌರವ ಸಿಗುವುದಿಲ್ಲ ಪ್ರೀತಿ,ವಿಶ್ವಾಸ ಗಳಿಸಿ ಭೀಮಾತೀರ ಹಣೆ ಪಟ್ಟಿ ಕಳಚಿ ಭೀಮಾಸೀರಿ ಎಂದು ಪ್ರಖ್ಯಾತರಾಗೋಣ ಎಂದರು.
ತದ್ದೇವಾಡಿ ಮಹಾಂತಯ್ಯಾ ಶಾಸ್ತಿçÃಗಳು ಪ್ರಾಸ್ತಾವಿಕ ಮಾತನಾಡಿದರು. ಕಾಶಿಪೀಠದ ಜಗದ್ಗುರು ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯಸಾನಿಧ್ಯವಹಿಸಿ ಅರ್ಶೀವಚನ ನೀಡಿದರು. ಹತ್ತಳಿ ಗುರುಪಾದೇಶ್ವರ ಸ್ವಾಮಿಗಳು, ಮಂದ್ರೂಪ ರೇಣುಕಾ ಶಿವಾಚಾರ್ಯರು, ಖೇಡಗಿ ಶಿವಬಸವರಾಜೇಂದ್ರ ಶಿವಾಚಾರ್ಯರು, ರೋಡಗಿ ಶಿವಲಿಂಗೇಶ್ವರ ಸ್ವಾಮಿಗಳು, ಆಲಮೇಲ ಜಗದೇವ ಮಲ್ಲಿಬೋಮ್ಮಯ್ಯ ಸ್ವಾಮಿಗಳು, ಮಾಳಕಠೆ ಸ್ವಾಮಿಗಳು, ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು ,ಅರ್ಥಗಾದ ಮುರು ಘೇಂದ್ರ ಶಿವಾಚಾರ್ಯರು, ಡಾ.ಚಂದ್ರಶೇಖರ ಶಿವಾಚಾರ್ಯರು, ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು ಸಾನಿಧ್ಯ ವಹಿಸಿದರು.
ಕಾರ್ಖಾನೆ ನಿರ್ದೇಶಕರಾದ ವಿಶ್ವನಾಥ ಬಿರಾದಾರ, ಜೆಟ್ಟಪ್ಪ ರವಳಿ, ಅಶೋಕ ಗಜಾಕೋಶ, ಎಂ,ಆರ್ ಪಾಟೀಲ, ಬಿ,ಎಂ ಕೋರೆ. ಸುರೇಶಗೌಡ ಪಾಟೀಲ, ಧಾನಮ್ಮಗೌಡತಿ ಬಿರಾದಾರ, ಲಲಿತಾ ನಡಗೇರಿ.ಸಿದ್ದಣ್ಣಾ ಬಿರಾದಾರ, ಅರ್ಜುನ ನಾಯ್ಕೋಡಿ, ಮಹಾ ದೇವ ನಗರೆ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಸೇರಿದಂತೆ ತಾಲೂಕಿನ ರೈತರು,ಗಣ್ಯರು ಕಾರ್ಖನೆಯ ಸಿಬಂದ್ದಿಗಳು ಉಪಸ್ಥಿತರಿದ್ದರು.
ಇದೆ ಸಂದರ್ಬದಲ್ಲಿ ಕೃಷಿ ಇಲಾಖೆ ಇಂಡಿ ಮತ್ತು ರೋಹಿಣಿ ಬೈಯೋಟಿಕ ಮಹಾಲಿಂಗಪೂರ ಇವರ ಸಹಯೋಗದಲ್ಲಿ ೨೦೨೨-೨೩ನೇ ಸಾಲಿನ ಕಬ್ಬು ಬೆಳೆಗಾರರ ವಿಚಾರ ಸಂಕೀರ್ಣ ನಡೆಸಿ ರೈತರಲ್ಲಿ ಯಾವ ಮಾದರಿ ಕಬ್ಬು ಬೆಳೆಯಬೇಕು ಹಾಗೂ ಇಳುವರಿಗೆ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಕಾರ್ಯಾಗಾರ, ವಿಚಾರ ಸಂಕೀರ್ಣ ತರಬೇತಿ ನೀಡಿದರು.
ಧನರಾಜ ಮುಜಗೊಂಡ ಕಾರ್ಯಕ್ರಮ ನಿರೂಪಿಸಿದರು.