ಎಐಎಂಐಎಂ ಬೆಂಬಲಿಗರ ವಿಜಯೋತ್ಸವ
ಕೊಲ್ಹಾರ:ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಐಎಂ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ ಪರಿಣಾಮ ಪಟ್ಟಣದಲ್ಲಿ ಎಂಐಎಂ ಜಿಲ್ಲಾಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡ ಸಲೀಮ ಅತ್ತಾರ ಮಾತನಾಡುತ್ತಾ ಬ್ಯಾರಿಸ್ಟರ್ ಅಸದುದ್ದೀನ್ ಓವೈಸಿಯವರ ಮನವಿಗೆ ಸ್ಪಂದಿಸಿ ಜನಸೇವೆ ಮಾಡಲು ವಿಜಯಪುರ ಜನತೆ ಎಂಐಎಂ ಪಕ್ಷದ ಇಬ್ಬರು ಅಭ್ಯರ್ಥಿ ಗಳಿಗೆ ಅವಕಾಶ ನೀಡಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಎಐಎಂಐಎಂ ಜಿಲ್ಲಾಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಮಾತನಾಡುತ್ತಾ ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳಿಗೆ ಅಭೂತಪೂರ್ವಕ ಗೆಲುವು ನೀಡಿರುವ ಮತದಾರರಿಗೆ ಧನ್ಯ ವಾದಗಳು ಅರ್ಪಿಸುತ್ತೆವೆ. ಸರ್ವರ ಹಿತವನ್ನು ಗಮನದಲ್ಲಿಟ್ಟುಕೊಂಡು ನಾವುಗಳು ಮುನ್ನಡೆಯುತ್ತೆವೆ ಈ ಹಿಂದೆ ಕೊಲ್ಹಾರ ಪ ಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಇಬ್ಬರು ಸದಸ್ಯರು ಆಯ್ಕೆಯಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಅವಿರತವಾಗಿ ಶ್ರಮಿಸುತ್ತಿದ್ದಾರೋ ಅದೇ ರೀತಿ ವಿಜಯಪುರ ಚುನಾಯಿತ ಸದಸ್ಯರು ಕೂಡ ತಮ್ಮ ಹಕ್ಕು ಪಡೆಯುವಲ್ಲಿ ಹಿಂದೆ ಬೀಳುವುದಿಲ್ಲ ಎಂದು ಹೇಳಿದರು.
ನಮ್ಮ ಹಕ್ಕು ಪಡೆಯುವುದು ಹಾಗೂ ನಮ್ಮ ವಾರ್ಡ್ ಅಭಿವೃದ್ಧಿ ಪಡಿಸುವುದು ಸ್ಥಳಿಯ ಶಾಸಕರಿಗೆ ತಲೆ ನೋವಿನ ವಿಷಯವಾದಲ್ಲಿ ನಾವುಗಳು ಏನು ಮಾಡಲು ಸಾದ್ಯ?.
ಅಭಿವೃದ್ಧಿಗಾಗಿ ಅನುದಾನಕ್ಕಾಗಿ ನಮ್ಮ ಪಕ್ಷದ ಸದಸ್ಯರು ನಿರಂತರವಾಗಿ ಶ್ರಮಿಸುತ್ತಾರೆ ಎಂದು ಅವರು ಹೇಳಿದರು. ಮುಂಬರುವ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾ ಯತ್ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಈ ಸಂದರ್ಭದಲ್ಲಿ ಅವರು ಸ್ಪಷ್ಟಿಕರಿಸಿದರು.
ಪ.ಪಂ ಸದಸ್ಯ ತೌಸೀಪ ಗಿರಗಾಂವಿ, ಮುಖಂಡರಾದ ಬಂದೇನವಾಜ ಗಿರಗಾಂವಿ, ಜಾವೀದ ಬೀಳಗಿ, ಸಲೀಮ ಕೊತ್ತಲ್, ಸಲೀಮ ಸಾರವಾಡ, ರಪೀಕ ಹಳ್ಳಿ ಇತರರು ಇದ್ದರು.