ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಿಧನ
ಕೊಲ್ಹಾರ:ಪಟ್ಟಣದ ನಿವಾಸಿ ಎಂ.ಬಿ ಸ್ಟೋನ್ ಕ್ರಶರ್ ಮಾಲಿಕರು, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಆದಂತಹ ಮಹೇಬೂಬಸಾಬ ಬಿಜಾಪುರ(86) ಮಂಗಳವಾರ ನಿಧನರಾದರು. ಮೃತರಿಗೆ ಆರು ಜನ ಪುತ್ರರು, ಆರು ಜನ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ:ಖಾನ್ ಕಾಯೇ ಗಫ್ಫಾರೀಯಾ ಗುರುಕುಲದ ಪೀಠಾಧಿಪತಿಗಳಾದ ಅಲ್ ಹಾಜ್ ಬಕ್ತಿಯಾರ್ ಖಾನ್ ಪಠಾಣ, ದಿಗಂಬರೇ ಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಶಾಸಕ ಶಿವಾನಂದ ಪಾಟೀಲ್, ಸಂಗರಾಜ ದೇಸಾಯಿ, ಅಪ್ಪುಗೌಡ ಪಾಟೀಲ್(ಮನಗೂಳಿ), ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಆರ್ ಬಿ ಪಕಾಲಿ, ಪ ಪಂ ಸದಸ್ಯರಾದ ತೌಸೀಪ್ ಗಿರಗಾಂವಿ ಇತರರು ಸಂತಾಪ ಸೂಚಿಸಿದ್ದಾರೆ.