ನಾಡು, ನುಡಿ ಕೆಚ್ಚು ಕನ್ನಡಿಗರಲ್ಲಿಬೇಕು: ಎ.ಸಿ ರಾಮಚಂದ್ರ ಗಡದೆ
ಇಂಡಿ:ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಕನ್ನಡಿಗರಲ್ಲಿ ಸ್ವಾಭಿಮಾನದ ಕೆಚ್ಚು ಸದಾ ಕನ್ನಡಿಗರಲ್ಲಿರಬೇಕು ಎಂದು ಎ.ಸಿ ರಾಮಚಂದ್ರ ಗಡದೆ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಹಂಚಿಹೋದ ಕರ್ನಾಟಕವನ್ನು ಅಖಂಡ ಕರ್ನಾಟಕವಾಗಿಸಲು ಕರ್ನಾಟಕ ಏಕೀಕರಣಕ್ಕೆ ಆಲೂರು ವೇಂಕಟರಾಯರು ಕೋಡುಗೆ ಸಾಕಷ್ಟು.
ಕರ್ನಾಟಕದ ಮಸ್ಸುಗಳನ್ನು ಕೂಡಿಸಲು ಕನ್ನಡದ ದಿಗ್ಗಜುರುಗಳಾದ ಕುವೆಂಪು, ಹುಯಿಲಗೋಳ ನಾರಾಯಣರಾಯರು, ದ.ರಾ.ಬೇಂದ್ರೆ, ಚಂದ್ರಶೇಖರ ಕಂಬಾರ, ವಿ.ಕೃ.ಗೋಕಾಕ, ಪಾಟೀಲ ಪುಟ್ಟಪ್ಪ, ಶ್ರೀನಿವಾಸ ಸೇರಿದಂತೆ ಅನೇಕ ಮಹನೀಯರು ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ.
ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸಿ ಅಖಂಡ ಕರ್ನಾಟಕ ಕಟ್ಟಿದ್ದಾರೆ. ಕನ್ನಡ ಭಾಷೆ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ೨೦೦೮ರಲ್ಲಿ ಕನ್ನಡಕ್ಕೆ ಶಾಸ್ತಿçÃಯ ಸ್ಥಾನ ಮಾನ ನೀಡಿದ್ದಾರೆ. ಕನ್ನಡ ಭಾಷೆ ಉಳಿಸಿ ಬೆಳೆಸಲು ಗಡಿಭಾಗಗಳಲ್ಲಿ ೧೮೯೧ರಲ್ಲಿ ಕರ್ನಾಟಕ ವಿಧ್ಯಾವರ್ಧಕ ಶೈಕ್ಷಣಿಕ ಸಂಘ ಸ್ಥಾಪನೆ ಮಾಡಿ ಕನ್ನಡ ಭಾಷೆ ಉತ್ತಂಗ ಶಿಖರಕ್ಕೆ ಕೊಂಡ್ಯೂಯಲಾಗಿದೆ ಎಂದರು.
ವಿಶ್ರಾಂತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಉಪನ್ಯಾಸ ನೀಡಿ ಮಾತನಾಡಿ ಕರುನಾಡು ಕಾವೇರಿಯಿಂದ ಗೋದಾವರಿ ವರೆಗೆ ಇದರ ವ್ಯಾಪ್ತಿ ಹರಡಿದ್ದು, ಈ ನಾಡಿನ ಸಾಹಿತ್ಯ, ಸಾಂಸ್ಕೃತಿಕ ದೇಶದಲ್ಲಿಯೇ ಅತ್ಯುನ್ನತವಾದದ್ದು. ಮೈಸೂರು ರಾಜ್ಯದಿಂದ ಉದಯವಾದ ಈ ನಾಡು ಕರ್ನಾಟಕ ರಾಜ್ಯವಾಗಿ ರೂಪುಗೊಂಡು ಕನ್ನಡದ ಭಾಷೆ, ನೆಲ, ಜಲದ ಬಗ್ಗೆ ಸ್ವಾಭಿಮಾನ ಕನ್ನಡಿಗರು ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಬನ್ನೆಮ್ಮಾ ಹದರಿ, ತಹಶೀಲ್ದಾರ ನಾಗಯ್ಯಾ ಹಿರೇಮಠ, ತಾಪಂ ಅಧಿಕಾರಿ ಸುನೀಲ ಮದ್ದಿನ,ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಮುಖ್ಯಾಧಿಕಾರಿ ಕೆ.ಎಸ್.ಲಕ್ಷ್ಮೀಶ, ವಸಂತ ರಾಠೋಡ. ಡಿವೈಎಸ್‌ಪಿ ಚಂದ್ರ ಶೇಖರ ನಂದರೆಡ್ಡಿ, ಧನರಾಜ ಮುಜಗೊಂಡ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಪಟ್ಟಣದ ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಲೂಕಿನ ಮತದಾರರ ಪಟ್ಟಿಯನ್ನು ಆಧಾರಗೆ ಜೋಡಣೆಯಲ್ಲಿ ನೂರಕ್ಕೆ ನೂರರಷ್ಟು ಕಾರ್ಯ ಮಾಡಿದ ಬಿ.ಎಲ್.ಓ ಗಳಿಗೆ ಸನ್ಮಾನಿಸಿದರು.