ಡಾ. ವಿಷ್ಣುವರ್ಧನ ವೃತ್ತದಲ್ಲಿ ಕನ್ನಡ ಭುವನೇಶ್ವರಿಗೆ ಪೂಜೆ
ಇಂಡಿ:ಕನ್ನಡ ರಾಜ್ಯೋತ್ಸವ ಪ್ರಯುಕ್ತ ಡಾ. ವಿಷ್ಣುವರ್ಧನ ವೃತ್ತದಲ್ಲಿ ಕನ್ನಡ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾ.ರಾಜಶೇಖರ ಕೊಳೆಕರ್ ಮಾತನಾಡಿ ಕನ್ನಡ ಭಾಷೆ ಸರಳ, ಸುಲಲಿತವಾಗಿದ್ದು ಭಾಷೆಯಲ್ಲಿ ಮೃದುತ್ವ ಇದೆ. ಇಂಡಿ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿದ್ದರೂ ಕನ್ನಡ ಭಾಷೆಗೆ ಯಾವುದೇ ಚ್ಯುತಿಬರದಂತೆ ಕನ್ನಡ ಭಾಷೆ ಶ್ರೀಮಂತ ಗೋಳಿಸಿರುವುದು ಈ ಭಾಗದ ಜನರ ಹೃದಯಶ್ರೀಮಂತಿಕೆ ಕಾರಣ.
ಕನ್ನಡ ನಾಡಿನಲ್ಲಿ ಸಾಹಿತಿಗಳು, ಸಂತಮಹಾ0ತರು, ಪತ್ರಕರ್ತರು ಹೀಗೆ ಅನೇಕ ದಿಗ್ಗಜರು ಅಖಂಡ ಕರ್ನಾಟಕ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಬೇರೆ ರಾಜ್ಯಗಳಿಗಿಂತ ಕರ್ನಾಟಕ ಸುಂದರ ಬೀಡು ಕವಿಗಳ ನಾಡು. ಪ್ರತಿ ರಮಣಿಯ ನೋಟ ವಿಂಹಗಮ ವಾಗಿದ್ದು ಸಸ್ಯ ಶಾಮಲೆಗಳಿಂದ ನಿಸರ್ಗ ಕಂಗೊಳಿಸುತ್ತಿವೆ ಇಂತಹ ನಾಡಿನಲ್ಲಿ ಜನಿಸಿರುವುದೆ ನಮ್ಮೇಲ್ಲರ ಭಾಗ್ಯ ಎಂದರು.
ಕನ್ನಡ ಭಾಷೆ ಪ್ರಾಚೀನ ಕಾಲದ ಇತಿಹಾಸವಿದೆ. ಹಲ್ಮಡಿ ಶಾಸನ ಕನ್ನಡದ ಪ್ರಥಮ ಶಾಸನ. ಕರ್ನಾಟಕದಲ್ಲಿ ಗಂಗ ,ಕದಂಬ ,ಚಾಲುಕ್ಯ, ಹೋಯ್ಸಳರು, ರಾಷ್ಟ್ರಕೂಟರು ಆಳಿದ್ದಾರೆ. ಕರ್ನಾಟಕ ವಿಜಯನಗರ ಅರಸರ ಕಾಲದಲ್ಲಿ ಮುತ್ತು ರತ್ನಗಳಿಂದ ಶ್ರೀಮಂತಿಕೆ ಸಾಮ್ರಾಜ್ಯವಾಗಿತ್ತು ಕನ್ನಡ ಸಾರಸ್ವತ್ವ ಲೋಕಕ್ಕೆ ಗಡಿ ಭಾಗದ ಹಲಸಂಗಿ ಗೆಳೆಯರಾದ ಮಧುರಚೆನ್ನ, ಸಿಂಪಿಲಿ೦ಗಣ್ಣಾ, ದೂಲಾಸಾಬ, ಶ್ರೀಂಗರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಪತ್ರಕರ್ತ ಶರಣಬಸಪ್ಪಾ ಕಾಂಬಳೆ ಹೇಳಿದರು.
ವಿ.ಎಸ್.ಎಸ್ ಸೇನೆ ಸಂಘಟನೆ ಗೌರವಾಧ್ಯಕ್ಷ ದಯಾನಂದ ಹೊಸಮನಿ, ಅಧ್ಯಕ್ಷ ಅಂಬರೀಶ ಕೋರಳ್ಳಿ, ಶಿವು ಬಡಿಗೇರ, ಮುರಾಳ, ಪತ್ರಕರ್ತ ಶರಣಬಸಪ್ಪಾ ಕಾಂಬಳೆ, ಶಂಕರ ಜಮಾದಾರ ವಿಷ್ಣು ಸೇನೆ ತಾಲೂಕಾ ಪದಾಧಿಕಾರಿಗಳು ಇದ್ದರು.