ಅರಳಿಚಂಡಿ ಕೆರೆ ತುಂಬುವ ಯೋಜನೆ ಕಾಮಗಾರಿ ವಿಳಂಭ
ಕುಂಭ ನಿದ್ರೆಗೆ ಜಾರಿದ ಕೆ,ಬಿ,ಜೆ,ಎನ್,ಎಲ್ ಅಧಿಕಾರಿಗಳು
ಬಸವನಬಾಗೇವಾಡಿ:ತಾಲೂಕಿನ ಅರಳಿಚಂಡಿ ಕೆರೆ ತುಂಬುವ ಯೋಜನೆಗೆ ಮಂಜೂರಾತಿ ನೀಡಿ ವರ್ಷ ಕಳೆದರು ಕಾಮಗಾರಿ ಆರಂಭವಾಗಿಲ್ಲ ಕೃಷ್ಣಾ ಬಾಗ್ಯ ಜಲ ಮೇಲ್ದಂಡೆ ಯೋಜನೆ ಅಧಿಕಾರಿಗಳು ಮಾತ್ರ ಕುಂಬ ನಿದ್ರೆಗೆ ಜಾರಿದಂತೆ ವರ್ತಿಸುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಬೆಸಿಗೆ ಸಮಯದಲ್ಲಿ ರೈತರಿಗೆ ಅನೂ ಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೆರೆ ತುಂಬುವ ಯೋಜನೆಯನ್ನ ಜಾರಿಗೊಳಿಸಿದೆ ಆದರೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾದ ಕೆರೆ ತುಂಬುವ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯುವಂತಾಗಿವೆ.
ಅರಳಿಚಂಡಿ ಕೆರೆಗೆ ನೀರು ತುಂಬಿಸುವುದರಿಂದ ಅರಳಿಚಂಡಿ ಇಂಗಳೇಶ್ವರ ಬಸವನ ಹಟ್ಟಿ ಸೇರಿದಂತೆ ಬಹುತೇಕ ರೈತರಿಗೆ ಅನುಕೂಲವಾಗುತ್ತದೆ ಆದರೆ ಎರಡು ವರ್ಷದಿಂದ ಈ ಬಾಗದ ರೈತರು ನೀರಿಗಾಗಿ ಪರದಾಡುವಂತಾಗಿದೆ.
ಅರಳಿಚಂಡಿ ಕೆರೆ ತುಂಬುವ ಯೋಜನೆಗೆ ೧ ಜುಲೈ ೨೦೨೧ರಂದು ಕಾಮಗಾರಿಗೆ ಅಂದಾಜು ೩೦ ಲಕ್ಷ ಅನುಧಾನದಲ್ಲಿ ಕಾಮಗಾರಿ ಆರಂಭಿಸಿ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸುವಂತೆ ಅಗ್ರಿಮೆಂಟ್ ಆಗಿದ್ದರು ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿ ಯಿಂದ ಕಾಮಗಾರಿ ಆರಂಭವಾಗಿಲ್ಲ ಈ ವಿಷಯ ಕುರಿತು ಕಾರ್ಯ ನಿರ್ವಾಹಕ ಅಭಿಯಂತರ ಅಮರೇಶ ಬಿರಾದರ ಅವರನ್ನು ಸಂಪರ್ಕಿಸಿದರೆ ಕಾಮಗಾರಿಗೆ ಮಂಜೂರಾತಿ ನೀಡಿ ಕೇವಲ ೫-೬ ತಿಂಗಳು ಆಗಿದೆ ಎಂದು ತಪ್ಪು ಮಾಹಿತಿ ನೀಡುತ್ತಾರೆ.
ಇಲಾಖೆಯಲ್ಲಿ ಯಾವ ಕಾಮಗಾರಿ ಯಾವಗ ಆರಂಭವಾಗಿದೆ ಎನ್ನುವುದು ಗೊತ್ತಿರದ ಇವರು ಸರ್ಕಾರಿ ಕೆಲಸಕ್ಕೆ ಯೋಗ್ಯರಾ ? ಎನ್ನುವುದು ಪ್ರಜ್ಞಾವಂತರ ಪ್ರಶ್ನೇ ಮೇಲಾಧಿಕಾರಿಗಳ ಸಲುಗೆಯಿಂದ ಕೆಳ ಮಟ್ಟದ ಅಧಿಕಾರಿಗಳು ರೈತರೊಂದಿಗೆ ಸ್ಪಂದಿಸುತ್ತಿಲ್ಲ ಹಾಗೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಅರಳಿಂಡಿ ಗ್ರಾಮದ ಪಕ್ಕದಲ್ಲಿಯೇ ಕಾಲುವೆ ನಿರ್ಮಿಸಿ ನೀರು ಹರಿಸಲಾಗಿದೆ ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಪಕ್ಕದ ಕೆರೆ ತುಂಬುವ ಯೋಜನೆ ಕಾಮಗಾರಿ ಆರಂಭಿಸದಿರುವದು ವಿಪರ್ಯಾಸವೆ ಸರಿ.
ರೈತರ ಬಹುನಿರೀಕ್ಷಿತ ಕೆರೆ ತುಂಬುವ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯುತ್ತಿವೆ ಇನ್ನಾದರೂ ಅಧಿಕಾರಿ ಗಳು ಎಚ್ಚೆತ್ತು ಅರಳಿಚಂಡಿ ಕೆರೆ ಕಾಮಗಾರಿ ಆರಂಭಿಸಿ ಕೆರೆಗೆ ನೀರು ಹರಿಸಲು ಮುಂದಾಗಬೇಕು ಎನ್ನುವದು ರೈತರ ಆಗ್ರಹವಾಗಿದೆ.
ಕಾಮಾಗಾರಿ ವಿಳಂಭಕ್ಕೆ ಉನ್ನತ ಮಟ್ಟದಿಂದ ಹಿಡಿದು ಕೆಳ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಇನ್ನಾದರು ಕೃಷ್ಣಾ ಮೇಲ್ದಂಡೆ ಮುಖ್ಯ ಇಂಜನಿಯರ ಸುರೇಶ ಅವರು ಕಾಮಗಾರಿಯನ್ನು ಆರಂಭಿಸಿ ರೈತರಿಗೆ ಅನೂಕೂಲ ಕಲ್ಪಿಸುತ್ತರಾ ಎನ್ನುವುದನ್ನು ಕಾದು ನೋಡಬೆಕಾಗಿದೆ.