ಸಡಗರ ಸಂಭ್ರಮದ ಕೋಡೆಕಲ್ ಬಸವೇಶ್ವರ ಪಲ್ಲಕ್ಕಿ ಉತ್ಸವ
ಬಸವನಬಾಗೇವಾಡಿ:ಪಟ್ಟಣದ ಶ್ರೀ ಕೋಡೆಕಲ್ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಪಲ್ಲಕ್ಕಿ ಉತ್ಸವವು ಬುಧವಾರ ಸಡಗರ ಸಂಭ್ರಮದಿ0ದ ಜರುಗಿತು.
ಶ್ರೀ ಕೋಡೆಕಲ್ ಬಸವೇಶ್ವರರಿಗೆ ಮಂಗಳವಾರ ರಾತ್ರಿ ಗಂಧ ನೇರವೆರಿಸಲಾಯಿತು ಬುಧವಾರ ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವವು ನಂದೀಶ್ವರನ ದೇವಸ್ಥಾನ ತಲುಪಿ ನಂದೀಶ್ವರನಿಗೆ ವಿಶೇ಼ ಪೂಜೆ ಸಲ್ಲಿಸಿ ನಂತರ ದೇವಸ್ಥಾನ ತಲುಪಿತು ಪಲ್ಲಕ್ಕಿ ಮೆರವಣಿಗೆಯಲ್ಲಿ ಕೋಡೆಕಲ್ ಬಸವೇಶ್ವರರ ವಚನ ಪಠನ ಮಾಡಲಾಯಿತು. ನಂತರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಪ್ರಸಾದ ಸೇವೆಯನ್ನ ಕಲ್ಪಿಸಲಾಗಿತ್ತು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಅಶೋಕ ಹಾರಿವಾಳ, ಮುಖಂಡರಾದ ಬಸಪ್ಪ ಹಾರಿವಾಳ, ಶಿವರಾಯ ರಾಯಗೊಂಡ, ಚಂದ್ರಶೇಖರ ಮುರಾಳ, ಸುಭಾಸ ನಾಶಿ, ಶೇಖಪ್ಪಾ ಹಾರಿವಾಳ, ಸಂಗು ರಾಯಗೊಂಡ, ಮುತ್ತು ಹಾರಿವಾಳ, ಜಗು ಹಾರಿವಾಳ ಸೇರಿದಂತೆ ಮುಂತಾದವರು ಮೆರವಣಿಯಲ್ಲಿ ಭಾಗವಹಿಸಿದ್ದರು.