ಅಲ್ಪಸಂಖ್ಯಾತರ ಪರ ಬೇಡಿಕೆ ಈಡೇರಿಸುವಂತೆ ಒತ್ತಾಯ: ಸರಕಾರಕ್ಕೆ ಮನವಿ
ಇಂಡಿ:ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಎ. ಹಾಗೂ ದಲಿತ ಸಂಘರ್ಷ ಸಮಿತಿ ಶೋಷೀತ ಹಿಂದುಳಿದ ,ಅಲ್ಪಸಂಖ್ಯಾತರ ಪರವಾಗಿ ಕೆಲವೊಂದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕಾ ಅಧ್ಯಕ್ಷ ನಾಗೇಶ ತಳಕೇರಿ, ಸದ್ದಾಂ ಅರಬ ಇವರನೈತೃತ್ವ ದಲ್ಲಿ ಮಿನಿವಿಧಾನಸೌಧಾದಲ್ಲಿರುವ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ದರು.
ಈ ಸಂದರ್ಭದಲ್ಲಿ ತಾಲೂಕಾ ರಿಪಬ್ಲಿಕನ್ ಪಾರ್ಟಿ ಅಧ್ಯಕ್ಷ ನಾಗೇಶ ತಳಕೇರಿ ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಾ ಕ್ರೀಡಾಂಗಣಕ್ಕೆ ಡಾ.ಬಿ.ಆರ್ ಅಂಬೇಡ್ಕರವರ ಹೆಸರಿಡಬೇಕು, ಪಟ್ಟಣದ ಹೃದಯ ಭಾಗದ ಅಂಬೇಡ್ಕರ ಪುತ್ಥಳಿ ನವೀಕರಣ ಮಾಡಬೇಕು, ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಬಡವರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಕೂಡಲೆ ವೈದ್ಯರನ್ನು ವರ್ಗಾವಣೆ ಮಾಡಬೇಕು.
ಸರಕಾರಿ ಆಸ್ಪತ್ರೆಯಲ್ಲಿ ಎ,ಆರ್.ಎಸ್ ಅನುಧಾನ ವರ್ಷಗಳ ಉನ್ನತ ಮಟ್ಟದ ತನಿಖೆ ಯಾಗಬೇಕು. ಇಂಡಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಓಡಿಸಬೇಕು. ಇಂಡಿ ಪಟ್ಟಣದ ವಿಜಯಪೂರ ರಸ್ತೆಯ ವಿಧ್ಯಾಗೀರಿ ಬಡವಾವಣೆಯಲ್ಲಿ ಸರಕಾರಿ ಶಾಲೆಗಳಿದ್ದು ವಿಶೇಷ ಸಾರಿಗೆ ಬಸ್ ಓಡಿಸಬೇಕು ಹಾಗೂ ವಿಧ್ಯಾರ್ಥಿಗಳ ಹಿತದೃಷ್ಠಿಯಿಂದ ಬಸ್ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು.
ತಾಲೂಕಿನ ಸರಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಶಿಸ್ತುಕ್ರಮ ಜರುಗಿಸಬೇಕು, ಡಿ.ದೇವರಾಜ ಅರಸ ವಿಧ್ಯಾರ್ಥಿಗಳ ವಸತಿ ನಿಲಯ ಗಾಗೂ ಸಮಜ ಕಲ್ಯಾಣ ಇಲಾಖೆ ವಸತಿ ನಿಲಯಗಳ ಅಭಿವೃದ್ದಿಪಡಿಸಬೇಕ. ನಕಲಿ ಯೂಟ್ಯೂಬ ನಕಲಿಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಅವುಗಳ ಮೇಲೆ ಕಠೀಣ ಕ್ರಮಕೈಗೊಳ್ಳಬೆಕು, ತಾಲೂಕಿನ ಎಲ್ಲಾ ಎಸ್ಸಿ,ಎಸ್.ಟಿ ಜನಾಂಗಕ್ಕೆ ಸ್ಮಶಾನ ಭೂಮಿ ಒದಗಿಸಬೇಕು ಕೂಡಲೆ ಈ ಎಲ್ಲಾ ಮನವಿಗಳಿಗೆ ಸರಕಾರ ಸ್ಪಂದಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಸುರೇಶ ನಡಗಡ್ಡಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಡಿ.ಎಸ್.ಎಸ್ ಮುಖಂಡ ವಿನಾಯಕ ಗುಣಸಾಗರ, ತಾಲೂಕಾ ಅಧ್ಯಕ್ಷ ನಾಗೇಶ ತಳಕೇರಿ, ಹಣಮಂತ ಆಲಮೇಲ, ಸದ್ದಾಂ ಅರಬ, ಬಿ.ಎಸ್ ತಳವಾರ, ರಾಮ ಕಾಂಬಳೆ, ರವಿಕುಮಾರ ಸಿಂಗೆ, ಬಾಬು ಕಾಂಬಳೆ, ಅಂಬೇಡ್ಕರ ಕಾಂಬಳೆ, ಸಚೀನ ಸಾವಳೆ, ಅಯೂಬ ನಾಟೀಕಾರ, ಸುರೇಶ ನಡಗಡ್ಡಿ ,ದುಂಡು ಬಿರಾದಾರ, ಮುತ್ತು ಹೊಸಮನಿ, ಸುನೀಲ ಕಾಲೇಬಾಗ ಪ್ರಶಾಂತ ಕಾಂಬಳೆ, ಹೇಮಂತ ಸಾವಳಕರ್, ಅಯೂಬ ನಾಟೀಕರ ,ರೇಖಾ ಸಿಂಗೆ, ಶೋಭಾ ಕಟ್ಟಿ, ಕಾಂತಾಬಾಯಿ ಮುನಸಿ, ಧಾನೇಶ್ವರಿ, ಸವಿತಾ ಚೆಲುವಾದಿ ಸೇರಿದರೆ ಅನೇಕರಿದ್ದರು.