ಕುತಂತ್ರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯ: ಮನವಿ
ಇಂಡಿ:ಬಣಜಿಗರ ಹೆಸರಿನಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಗಾರರಾದ ಬಸವನಗೌಡ ಪಾಟೀಲ ಯಾತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ ತೇಜೋವಧೆ ಮಾಡುತ್ತ ಹಾಗೂ ಸಮುದಾಯಗಳ ನಡುವೆ ವೈಷಮ್ಯ ಬಿತ್ತುತ್ತಿರುವ ಕುತಂತ್ರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ, ಪಂಚಮಸಾಲಿ ಸಮಾಜದ ವತಿಯಿಂದ ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾ ಯಿತು.
ಈ ಸಂದರ್ಭದಲ್ಲಿ ಪಂಚಮಸಾಲಿ ಜಿಲ್ಲಾ ಯುವಘಟಕದ ಅಧ್ಯಕ್ಷ ಸೋಮಶೇಖರ ದೇವರ ಮಾತನಾಡಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಎರಡು ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ಚಳುವಳಿಯನ್ನು ಮಾಡುತ್ತ ಸರ್ಕಾರಕ್ಕೆ ಹಕ್ಕೊತ್ತಾಯದ ಹೋರಾಟ ನಡೆಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಆಮಿಷಕ್ಕೆ ಒಳಗಾಗಿ, ರಾಷ್ಟ್ರ ಮಟ್ಟದಲ್ಲಿ ಲಿಂಗಾಯತ ನಾಯಕರಾಗಿ ಬೆಳೆಯುತ್ತಿರುವ ಬಸವನಗೌಡ ಪಾಟೀಲ್ ಯಾತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ ಬೆಳವಣಿಗೆಯನ್ನು ಸಹಿಸದೆ, ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ ಕೆಲವೇ ಕೆಲವು ಜನರು ಕೂಡಿಕೊಂಡು ಅವರ ಭಾವಚಿತ್ರವನ್ನು ಸುಟ್ಟು ಹಾಕುತ್ತಿರುವುದು ನಮ್ಮ ಸಮಾಜಕ್ಕೆ ತೀವ್ರ ನೋವಾಗಿದೆ ಎಂದರು.
ಇ0ತಹವುಗಳನ್ನು ಮಾಡುತ್ತಾ ಜಾತಿ ವೈಷಮ್ಯವನ್ನು ಹೆಚ್ಚು ಮಾಡುತ್ತಿದ್ದಾರೆ. ಪಂಚಮಸಾಲಿ ಹಾಗೂ ಬಣಜಿಗ ಸಮಾಜ ಈ ರಾಜ್ಯದಲ್ಲಿ ಯಾವತ್ತೂ ಸಹೋದರರಂತೆ ಬದುಕಿದ್ದೇವೆ. ನಮ್ಮ ಬಣಜಿಗ ಸಮಾಜದ ನಡುವೆ ಸಾಕಷ್ಟು ಮದುವೆ ಸಂಬ0ಧಗಳು ಹಿಂದಿನಿ0ದಲೂ ಇಲ್ಲಿಯವರೆಗೂ ನಡೆಯುತ್ತಲಿದೆ. ನಾವು ಇದುವರೆಗೂ ಅವರನ್ನು ನಮ್ಮ ಬೀಗರು ಎಂದು ಸಂಭೋದಿಸುತ್ತ ಗೌರವದಿಂದ ಕಾಣುತ್ತಾ ಬಂದಿದ್ದೇವೆ. ಹುಕ್ಕೇರಿಯ ಸಮಾವೇಶದಲ್ಲಿ ಯಾತ್ನಾಳ್ ಗೌಡರು ಮಾತನಾಡುವಾಗ ರೈತರು ಅಂಗಡಿ ಗಳಿಗೆ ವ್ಯವಹಾರ ಮಾಡುವಾಗ ವ್ಯಾಪಾರಸ್ಥರಿಂದ ಹೇಗೆ ಆರ್ಥಿಕವಾಗಿ ಯಾವ ರೀತಿಯಾಗಿ ಶೋಷನೆಯನ್ನು ಅನುಭವಿಸು ತ್ತಿದ್ದಾರೆ ಎಂಬುದನ್ನು ನಮ್ಮ ಸಮಾಜಕ್ಕೆ ತಿಳುವಳಿಕೆ ರೂಪದಲ್ಲಿ ಹೇಳಿದ್ದಾರೆ ಹೊರತು ಎಲ್ಲಿಯೂ ಬಣಜಿಗ ಶೆಟ್ಟರ ಸಮಾಜ ವನ್ನು ಟೀಕಿಸಿಲ್ಲ.
ಇದಕ್ಕೆ ಬೇಕಾದ ಎಲ್ಲ ಟಿವಿ ವಿಡಿಯೋ ಪತ್ರಿಕಾ ದಾಖಲೆಗಳು ಇವೆ ಎಂದರು. ಕಾಶಪ್ಪನವರ್ ಹುಕ್ಕೇರಿಯಲ್ಲಿ ನಮ್ಮವರು ಯಾವುದೇ ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ದಿಸಿದರು ಸಹ ಪಕ್ಷಬೇಧ ಮಾಡದೇ ಶಾಸಕರನ್ನಾಗಿ ಮಾಡಿ ಎಂದು ರಾಜಕೀಯ ಹಕ್ಕನ್ನು ಕೇಳಿದ್ದಾರೆ. ಹೊರತು ಬಣಜಿಗ ಸಮಾಜದವರನ್ನು ಎಲ್ಲಿಯೂ ಬೈದಿಲ್ಲ. ಈ ಮಾತನ್ನು ಸಹಿಸದ ಆಮಂತ್ರಣವಿಲ್ಲದೆ ಸಮಾವೇಶದಲ್ಲಿ ಭಾಗವಹಿಸಿ, ಕೆಳಗಡೆ ಕುಳಿತಿದ್ದ ಯುವಕನೊಬ್ಬ ಸಮಾವೇಶವನ್ನು ವಿಘ್ನಗೊಳಿಸಲು ಪ್ರಯತಿಸಿದ.
ಸಹಜವಾಗಿಯೇ ನಮ್ಮ ನಾಯಕರು ರಾಜಕೀಯ ಪ್ರಾತಿನಿಧ್ಯದ ಹಕ್ಕಿನ ಬಗ್ಗೆ ಮಾತಾನಾಡಿದಾಗ, ಸಮಾವೇಶ ಹಾಳು ಮಾಡಲು ಬಂದ ಯುವಕನಿಗೆ ಬುದ್ದಿ ಹೇಳಿದ್ದಾರೆ ಎಂದರು.
ಒ0ದು ವೇಳೆ ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಿದ್ದು ಇದ್ದಿದ್ದರೆ ನಾವು ಬಹಿರಂಗವಾಗಿ ಚರ್ಚೆಗೆ ಬರಲು ಸಿದ್ಧರಿದ್ದೇವೆ. ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುವುದು ಸರಿಯಲ್ಲ. ಕೂಡಲೇ ಸರ್ಕಾರ ಈ ಕುತಂತ್ರಿಗಳ ಮೇಲೆ ಕಾನೂನು ಕ್ರಮಕೈಗೊಂಡು ನಮ್ಮ ಹಾಗೂ ಬಣಜಿಗ ಸಮಾಜದ ಒಗ್ಗಟ್ಟನ್ನು ರಕ್ಷಿಸಿ ಸಹಬಾಳ್ವೆಯನ್ನು ಕಾಪಾಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.
ವಿನಾಕಾರಣ ಇದೆ ರೀತಿಯಲ್ಲಿ ನಮ್ಮ ಸಮಾಜದ ನಾಯಕರ ತೇಜೋವಧೆ ಮಾಡುವ ಪ್ರಯತ್ನ ಮುಂದುವರೆಸಿದರೆ ನಾವೂ ಸಹ ಪ್ರತಿಭಟನೆ ಮಾರ್ಗ ಹಿಡಿಯಬೇಕಾದೀತು ಎಂದು ಕುತಂತ್ರಿಗಳಿಗೆ ಈ ಮೂಲಕ ಎಚ್ಚರಿಕೆ ಕೊಡುತ್ತೇವೆ. ಭಾವಚಿತ್ರ ಸುಡುವ ಹೀನ ವರ್ತನೆ ಮಾಡಿಲ್ಲ. ಕುತಂತ್ರ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಮತ್ತವರ ಸುಪತ್ರರ ಭಾವಚಿತ್ರವನ್ನು ಸುಡುವ ಅವಕಾಶ ನಮಗೂ ಇದೆ. ಆದರೆ ನಮ್ಮ ಪೂಜ್ಯರು ಹಿರಿಯರು ಅಂತಹ ಕೆಟ್ಟ ಕೃತ್ಯವನ್ನು ಮಾಡಲು ಹೇಳಿಲ್ಲ. ಸರ್ಕಾರ ಕೂಡಲೇ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಅಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿಯಾಗ ಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಶೋಕಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಪ್ರಭೌಉ ಶಿರಕನಳ್ಳಿ, ಬಸವರಾಜ ಮಡಗೊಂಡ, ಅನೀಲಕುಮಾರ ಬಿರಾದಾರ, ಉಮೇಶ ಲಚ್ಯಾಣ, ಶಿವನಗೌಡ ಬಿರಾದಾರ, ಸಿದ್ದರಾಮ ಗೊರನಾಳ, ಪ್ರವೀಣ ಸಲಗರ್, ರಾಜಗುರು ದೇವರ, ಶಾಂತು ದೇವರ, ಸಂತೋಶ ಬಿರಾದಾರ, ರಾಘವೇಂದ್ರ ಗಡಗಲಿ, ಮಹಾದೇವ ಹದಗಲ್, ಶರಣಗೌಡ ಬಂಡಿ, ನಿಂಗನಗೌಡ ಬಿರಾದಾರ, ಪ್ರಶಾಂತ ಬಿರಾದಾರ, ಶ್ರೀಸೈಲ ಕರ‍್ಳಿ, ಈರಣ್ಣ ಸಿಂದಗಿ, ಮುತ್ತು ಸಿಂದಗಿ, ಅಶೋಕ ಅಕಲಾದಿ ಸೇರಿದಂತೆ ನೂರಾರು ಜನ ಸಮಾಜ ಬಾಂಧವರು ಭಾಗಿಯಾಗಿದ್ದರು.