ಸಮಿತಿ ಯಾವುದೇ ಒಂದು ಜಾತಿಗೆ ಸಿಮಿತವಾಗಿರುವುದಿಲ್ಲ
ಇಂಡಿ :ದಲಿತ ಸಂಘರ್ಷ ಸಮಿತಿ ಯಾವುದೇ ಒಂದು ಜಾತಿಗೆ ಸಿಮಿತವಾಗಿರುವುದಿಲ್ಲ. ಯಾವುದೇ ಜಾತಿಯ ಬಡವನಾಗಿದ್ದು, ಅವನಿಗೆ ಅನ್ಯಾಯವಾಗುತ್ತಿದ್ದರೆ, ಬಡವರು, ಶೋಷಿತರು,ಮಹಿಳೆಯರ ಪರವಾಗಿ ಹೋರಾಟ ಮಾಡುವುದಾಗಿದೆ.
ಪ್ರಜಾಪ್ರಭುತ್ವ ಉಳಿವಿಗಾಗಿ,ಸಂವಿಧಾನ ರಕ್ಷಣೆಯಾಗಿ ದಸಂಸ ಸದಾ ಹೋರಾಟ ಮಾಡುತ್ತದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಹೇಳಿದರು. ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.
ಡಿ.೬ ರಂದು ಬೆಂಗಳೂರಿನಲ್ಲಿ ಡಾ.ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದಂದು ರಾಜ್ಯದ ಎಲ್ಲ ಸಂಘಟನೆಗಳ ರಾಜ್ಯ ಮುಖಂಡರ ನೇತ್ರತ್ವದಲ್ಲಿ ಎಲ್ಲ ಸಂಘಟನೆಗಳನ್ನು ಒಂದುಗೂಡಲಿವೆ ಎಂದು ಹೇಳಿದ ಅವರು,ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕಾಮಪೀಶಾಚಿ ರೇಪ್ ಮಾಡಿ ಕೊಲೆ ಮಾಡಿದ್ದು ಮನುಕುಲ ತಲೆತಗ್ಗಿಸುವ ವಿಷಯವಾಗಿದೆ. ರಾಜ್ಯದಲ್ಲಿ ಮಹಿಳೆಯರ, ಮಕ್ಕಳ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಸರ್ಕಾರ ಮಹಿಳೆಯರು, ಮಕ್ಕಳ ಕುರಿತು ಕಠಿಣ ಕಾನೂನು ರೂಪಿಸಬೇಕು. ರೇಪ್ ಮಾಡಿದ ಯಾವುದೇ ವ್ಯಕ್ತಿ ಇದ್ದರೂ ಅಂತವ ನಿಗೆ ಹೈದ್ರಾಬಾದ ಮಾದರಿಯಲ್ಲಿ ಎನ್‌ ಕೌಂಟರ್ ಮಾಡಬೇಕು. ನೊಂದ ಕುಟುಂಬಕ್ಕೆ ೫೦ ಲಕ್ಷ ಆರ್ಥಿಕ ಸಹಾಯ ಸರ್ಕಾರ ಮಾಡಬೇಕು. ಕುಟುಂಬಕ್ಕೆ ರಕ್ಷಣೆ ನೀಡಬೇಕು. ಒಂದು ವೇಳೆ ಮಹಿಳೆಯರು,ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟದಿದ್ದರೆ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ದಸಂಸ ಪ್ರಭಾರಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನವರ ಮಾತನಾಡಿ,ಇಂಡಿ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು,ರಮೇಶ ನಿಂಬಾಳಕರ(ಸ0ಚಾಲಕ), ಧರೆಪ್ಪ ಮಂದೋಲಿ, ರೇವಣಸಿದ್ದ ಮಸಳಿಕೇರಿ,ರಾಮಚಂದ್ರ ದೊಡ್ಡಮನಿ (ಸಂಘಟನಾ ಸಂಚಾಲಕ), ಪು0ಡಲೀಕ ಮೇಲಿನಮನಿ (ಖಜಾಂಚಿ), ಬಾಬು ಗುಡಮಿ (ನಗರ ಸಂಚಾಲಕ), ಪರಮೇಶ್ವರ ಇಂಗಳೇಶ್ವರ (ವಿದ್ಯಾರ್ಥಿ ಒಕ್ಕೂಟದ ಸಂಚಾಲಕ)ರನ್ನಾಗಿ ನೇಮಕ ಮಾಡಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ರಮೇಶ ನಿಂಬಾಳಕರ, ಧರೆಪ್ಪ ಮಂದೋಲಿ, ರಾಮಚ0ದ್ರ ದೊಡ್ಡಮನಿ, ಪುಂಡಲೀಕ ಮೇಲಿನಮನಿ, ರೇವಣಸಿದ್ದ  ಮಸಳಿಕೇರಿ, ಬಾಬು ಗುಡಮಿ, ಪರಮೇಶ್ವರ ಇಂಗಳೇಶ್ವರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.