ಆರ್.ಎಮ್. ಶಹಾ ಪಬ್ಲಿಕ್‌ ಶಾಲೆಯಲ್ಲಿ೬೭ ನೇ ಕನ್ನಡರಾಜ್ಯೋತ್ಸವದ ಸಂಭ್ರಮ
ಇಂಡಿ:ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್.ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ೬೭ನೇ ಕನ್ನಡರಾಜ್ಯೋತ್ಸವ ಸಾಹಿತಿ ಸಂತೋಷ ಬಂಡೆ ನಾಡದೇವಿಯ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿ ಸಂಭ್ರಮದಿಂದ ಆಚರಿಸಲಾಯಿತು.
ಸಾಹಿತಿ ಸಂತೋಷ ಬಂಡೆ ಮಾತನಾಡಿದ ಅವರು ಕನ್ನಡನಾಡು ಭವ್ಯ ಪರಂಪರೆ  ಹೊಂದಿದ್ದು ಕನ್ನಡ ಭಾಷೆ ಸುಮಾರು ೨ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಕನ್ನಡ ಸಾಹಿತ್ಯಕ್ಕೆ ೮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ ದೇಶದ ಯಾವ ಭಾಷೆಗೂ ಇಷ್ಟೋಂದು ಸಿಕ್ಕಿಲ್ಲ, ಕನ್ನಡ ಭಾಷೆ ನೆಲ ಜಲ ಉಳಿಸಬೇಕಾದ ಪ್ರತಿಯೋಬ್ಬ ಕನ್ನಡಿಗರ ಜವಾಬ್ದಾರಿ ಯಾಗಿದೆ. ಪ್ರಾಚಾರ್ಯ ಪ್ರಕಾಶ ಪಾಟೀಲ್ ಕನ್ನಡ ಭಾಷೆ ಉಸಿರಾಗಬೇಕು ಎಂದರು.
ಶಿಕ್ಷಕಿಯರಾದ ಸವಿತಾ ಕೊಳೂರ ಮಾತನಾಡಿ ಕನ್ನಡ ನಾಡು ವೀರ ಶೂರರ ನಾಡು ಹಾಗೂ ಸರ್ವಜನಾಂಗದವರ ಆಶ್ರಯತಾಣವಾಗಿದ್ದು, ವಿದ್ಯಾರ್ಥಿಗಳು ಕರ್ನಾಟಕದ ಇತಿಹಾಸವನ್ನು ತಿಳಿದುಕೊಂಡು ಕನ್ನಡ ನಾಡಿನ ಮಹನೀಯರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಮಾದರಿ ವ್ಯಕ್ತಿಗಳಾಗಬೇಕು ಎಂದರು.
ಪ್ರಾಂಶುಪಾಲ ಪರವೀಣ ಜಮಾದಾರ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬಂದ್ದಿಗಳು, ವಿಧ್ಯಾರ್ಥಿಗಳಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ಅಕ್ಷತಾ ಬಿರಾದಾರ, ಕುಮಾರ- ವಿಕಾಸ ನಡುಗಡ್ಡಿ ನಿರೂಪಿಸಿ, ಸಂದೀಪ ನಾಗೋಡ ಸ್ವಾಗತಿಸಿ, ಪ್ರೀತಿ ಮುಜಗೊಂಡ ವಂದಿಸಿದರು.