ರಾಜ್ಯ ಅಂಧ ನೌಕರರ ಸಂಘದ ಸಹಯೋಗದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ
ಬಸವನಬಾಗೇವಾಡಿ:ಈಚೆಗೆ ನಿಧನರಾದ ಪಟ್ಟಣದ ಸಂಗೀತ ಕಲಾವಿದ ಶ್ರೀಮಂತ ಅವಟಿ ಅವರ ತೋಟದ ನಿವಾಸದಲ್ಲಿ ಭಾನುವಾರ ಬೆಂಗಳೂರಿನ ಕರ್ನಾಟಕ ರಾಜ್ಯ ಅಂಧ ನೌಕರರ ಸಂಘದ ಸಹಯೋಗದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮನಡೆಯಿತು.
ದಿ.ಶ್ರೀಮಂತ ಅವಟಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮೌನಾಚರಣೆ ಮಾಡಲಾ ಯಿತು. ನಂತರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಂಗೀತ ಕಲಾವಿದರು ಸಂಗೀತ ಕಾರ್ಯಕ್ರಮ ನೀಡುವ  ಮೂಲಕ ನುಡಿನಮನ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಂಧ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವೆಂಕಣ್ಣ ಕಂಬಾರ ಮಾತನಾಡಿ, ದಿ.ಶ್ರೀಮಂತ ಅವಟಿ ಅವರು ಅದ್ಬುತ ವ್ಯಕ್ತಿತ್ವ ಹೊಂದಿದ್ದರು. ಅವರು ಸಂಗೀತದಲ್ಲಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಮೂಲಕ ನಮ್ಮೆಲ್ಲರ ಮನಸ್ಸಿ ನಲ್ಲಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಅಂಧ ನೌಕರರ ಸಂಘದ ಕಾರ್ಯದರ್ಶಿ ಸತೀಶ ಜಾಲಿನಗರ ಮಾತನಾಡಿ,ದಿ. ಶ್ರೀಮಂತ ಅವಟಿ ಅವರು ಹೃದಯ ಶ್ರೀಮಂತಿಕೆ ಹೊಂದಿದ್ದರು. ನೂರಾರು ವಿದ್ಯಾರ್ಥಿಗಳಿಗೆ ಸಂಗೀತದ ಪಾಠ ಹೇಳಿಕೊಡುವ ಮೂಲಕ ಸಾವಿರಾರು ಸಂಗೀತ ಕಾರ್ಯಕ್ರಮ ಗಳನ್ನು ನೀಡಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದರು. ಇಂತಹವರ ಅಗಲಿಕೆ ನೋವು ತಂದಿದೆ ಎಂದು ಹೇಳಿದರು.
ಬಸವರಾಜ ಅವಟಿ ಮಾತನಾಡಿದರು. ಸತ್ಯಪ್ಪ ತಳವಾರ, ಹಣಮಂತ ಮಾದವನಗರ, ವಿಶಾಲಕ್ಷಿ ಮನಗೂಳಿ ರಶ್ಮಿ ಅವಟಿ, ಅಶೋಕ ಪಾಟೀಲ, ಕಾಶೀನಾಥ ಅವಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಮಂಜುನಾಥ ಕಳಕಬಂಡಿ, ಬಸವರಾಜ ಮಾದನಶೆಟ್ಟಿ, ಮಹಾಂತೇಶ ಅವಟಿ, ಶಿವಾನಂದ ಹೆರಕಲ್ ಇದ್ದರು.