ಬಸವರಾಜ್ ಕೌಲಗಿ ಅವರಿಗೆ ಸನ್ಮಾನ
ಬಸವನಬಾಗೇವಾಡಿ:ಪಟ್ಟಣದ  ಪತ್ರಕರ್ತ ಮಿತ್ರರು ಶನಿವಾರ ಸಂಜೆ  ಪಟ್ಟಣದ  ಪ್ರವಾಸಿ ಮಂದಿರದಲ್ಲಿ ಎಕ್ಷಲೆಂಟ್ ಸಮೂಹ  ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ  ಅಧ್ಯಕ್ಷ ಬಸವರಾಜ್  ಕೌಲಗಿ  ಅವರನ್ನು  ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಟ್ಟಣದಲ್ಲಿ  ತಮ್ಮ  ಸಂಸ್ಥೆಯಡಿ ಶಾಲೆ  ತೆರೆಯುವಂತೆ  ಮನವಿ  ಮಾಡಿಕೊಂಡರು.  ಸನ್ಮಾನ ಸ್ವೀಕರಿಸಿ ಬಸವರಾಜ್  ಕೌಲಗಿ  ಮಾತನಾಡಿ  ಸಿದ್ದೇಶ್ವರ ಶ್ರೀಗಳ  ಹಾಗೂ ತಮ್ಮೆಲ್ಲರ  ಆಶಯದಂತೆ  ಬರುವ  ದಿನಗಳಲ್ಲಿ ಸಂಸ್ಥೆಯ ವಿಭಾಗ ಆರಂಭಿಸುವುದಾಗಿ ಭರವಸೆ  ನೀಡಿದರು.
ತಾಲೂಕಾ ಕನ್ನಡ  ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವರುದ್ರಯ್ಯ    ಹಿರೇಮಠ  ಮಾತನಾಡಿ,  ಬಹು  ದಿನಗಳ ಆಶಯದಂತೆ ತಮ್ಮ ತವರು  ತಾಲೂಕಿನಲ್ಲಿ  ಸಂಸ್ಥೆಯ ವಿಭಾಗದ ಅವಶ್ಯಕತೆ ಇಲ್ಲಿಯ ಜನರದ್ದು ಇದೆ  ಶೀಘ್ರವೇ  ಈಡೇರಲಿ  ಎಂದರು.
ಪ್ರೊ ಪ್ರಕಾಶ್ ಮಸಬಿನಾಳ,ಮಹಾಂತೇಶ್  ಸಂಗಮ  ಹಾಗೂ ಗುರುರಾಜ್ ಕನ್ನೂರ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶ್ ಬೆಣ್ಣೂರ್, ರಾಜು ಗಣಾಚಾರಿ, ಬಸವ ರಾಜ್ ನಂದಿಹಾಳ, ನಾಗೇಶ್ ನಾಗೂರ, ಮಂಜು  ಕಲಾಲ, ವಾಸುದೇವ ಮ್ಯಾಗೇರಿ, ಅಬ್ದುಲ್ ಶಿವಣಗಿ  ಇದ್ದರು.