ರಾಜಕಾರಣಿಗಳ ಒಗ್ಗಟ್ಟಿನ ಮಂತ್ರ: ನೀರಾವರಿ ಯೋಜನೆ ಕ್ಯಾಬಿನೆಟ್ ಒಪ್ಪಿಗೆ
ಇಂಡಿ:ತಾಲೂಕಿನ ಹೋರ್ತಿ ಭೂ ಪ್ರದೇಶದ ಸಾವಳಸಂಗ ಗುಡ್ಡಗಾಡಿನಿಂದ ಕೂಡಿದ ಅತ್ಯೆಂತ ಎತ್ತರ ಪ್ರದೇಶ ನೀರಿನ ಯಾವುದೇ ಯೋಜನೆಗಳಿಂದ ವಂಚಿತವಾದ ಹನಿ ನೀರಿಗೂ ತತ್ವಾರ ಪಡುವ ಹುಲ್ಲು ಕಡ್ಡಿ ಬೆಳೆಯದ ಪ್ರದೇಶದಲ್ಲಿ ನಡೆದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಸದಾಶಯದಂತೆ ಈ ಭಾಗದ ರೈತರಿಗೆ ಹನಿ ನೀರು ನೀಡಿದರೆ ಕ್ಯಾಲಿಪೋ ರ್ನಿಯಾ ಆಗುತ್ತದೆ ಎಂಬ ವಾಣಿಯ ಮೇರೆಗೆ ಈ ಭಾಗದ ರಾಜಕಾರಣಿಗಳು ಒಗ್ಗಟ್ಟಿನ ಮಂತ್ರದೊ0ದಿಗೆ ಪಕ್ಷಾತೀತ ಸರಕಾರದ ಮೇಲೆ ಒತ್ತಡ ಹೇರಿ ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಯೋಜನೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ.
ಆದರೆ ಸದ್ಯ ಹನಿ ನೀರು ಇಲ್ಲದೆ ಇರುವ ಸಾವಳಸಂಗ ಗುಡ್ಡದ ಮೇಲೆ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳ ಇಚ್ಛಾಶಕ್ತಿ ಯಿಂದ ಗುಡ್ಡದ ಮೇಲೆ ಬದು ನಿರ್ಮಾಣ ಮಾಡಿ ಮಳೆ ನೀರು ಹಿಡಿದಿಟ್ಟು ಸಾವಿರಾರು ಅಮೂಲ್ಯವಾದ ಗಿಡಮರಗಳನ್ನು ಬೆಳೆಸಿ ವನ್ಯಪ್ರಾಣಿಗಳಿಗೆ ,ಹಕ್ಕಿ ಗುಬ್ಬಚ್ಚಿ, ಕಾಜಾಣಗಳಿಗೆ ಪ್ರವಾಸಿಗರಿಗೆ ಅಕರ್ಷಣಿಯ ತಾಣವನ್ನಾಗಿ ಮಾಡಿದ್ದಾರೆ.
ಕುರುಡು ಕಾಂಚಾಣ ಕುಣಿಯುತಲ್ಲಿತ್ತು ಎಂಬ ದಿನಮಾನಗಳಲ್ಲಿ ಸರಕಾರದ ಯೋಜನೆಗಳು ಸರಿಯಾಗಿ ಸದ್ಬಳಕ್ಕೆ ಮಾಡಿಕೊಳ್ಳದೆ ಸಾಕಷ್ಟು ದುರ್ಬಳಕೆಯಾಗಿವೆ ಎಂಬುದು ಕೇಳಿದ್ದೇವೆ ಆದರೆ ಸಮಾಜಿಕ ಅರಣ್ಯ ಇಲಾಖೆ ಕಳಕಳಿಯಿಂದ ಮಹಾತ್ಮಾಗಾಂಧಿಜೀ ನರೇಗಾ ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ಬಳಕೆ ಮಾಡಿಕೊಂಡು ತಾಲೂಕಿನ ಸಾವಳಸಂಗ ಗ್ರಾಮದ ಗುಡ್ಡದಲ್ಲಿ ಶ್ರೀಶ್ರೀಸಿದ್ದೇಶ್ವರ ವನ್ಯಧಾಮ ಅರಣ್ಯೀಕರಣ ಮಾಡುವ ಮೂಲಕ ಸಸ್ಯಕಾಶಿಯಂತೆ ಪ್ರವಾಸಿಗರಿಗೆ ಕೈ ಬೀಸಿ ಕರೆಯುವಂತೆ ಮಾಡಿರು ವುದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಬದ್ದತೆ ಕಾರಣ ಎಂದರೆ ತಪ್ಪಾಗುವುದಿಲ್ಲ.
ಜಿ.ಪಂ ಕಾರ್ಯನಿರ್ವಾಹಕ ರಾಹುಲ್ ಸಿಂಧೆ ಭೇಟಿ; ಪರಿಸರ ಉಳಿದರೆ ನಾವು, ಪರಿಸರ ದಲ್ಲಿ ಗಿಡಮರಗಳು ಇರದಿದ್ದರೆ ಮನುಷ್ಯ ನಿಗೆ ಜೀವಸಂಕುಲಗಳಿಗೆ ಪ್ರಾಣವಾಯು ಸಿಗುವುದು ಕಷ್ಟ ,ಸಾಮಾಜಿಕ ಅರಣ್ಯ ವಲಯದಿಂದ ಸಾವಳಸಂಗ ಗುಡ್ಡದಲ್ಲಿ ಮಳೆಯ ಹನಿ ನೀರು ನಿಲ್ಲದೆ ಇರುವ ಪ್ರದೇಶದಲ್ಲಿ ಗುಡ್ಡದ ಇಳಿಜಾರಿಗೆ ಅಡ್ಡಲಾಗಿ ಬದು ನಿರ್ಮಿಸಿ ನೀರು ಹಿಡಿದಿಟ್ಟು ಸಾವಿರಾರು ಗಿಡಮರಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅಕರ್ಷಣೆ ತಾಣ ಮಾಡಿರುವುದು ಪ್ರಶಂಸನೀಯ.
ಪ್ರವಾಸಿಗರಿಗೆ ಕೂಡಲು ಆಸನ, [ವಾಚ್ ಟಾವರ್] ವೀಕ್ಷಣಾ ಗೋಪುರ, [ಪಾತುವೆ] ಗುಡ್ಡ ಏರುವ ಸಲುವಾಗಿ ಮೆಟ್ಟಿಲು, ಪ್ರವಾಸಿಗರಿಗೆ ಪ್ರವಾಸ ಮಂದಿರ ನಿರ್ಮಾಣ, ಶುದ್ದ ಕುಡಿಯುವ ನೀರು, ಶೌಚಾಲಯ ಹೀಗೆ ಮೂಲಭೂತ ಸೌಲಭ್ಯ ಗಳನ್ನು ಒದಗಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
*
ಒಟ್ಟು ೨೭೮ ಎಕರೆ ಭೂಪ್ರದೇಶವಾಗಿದ್ದು ಇದರಲ್ಲಿ ಸೀತಾಫಲ್,ಪೇರು, ಮಹಾಗನಿ, ಬಿದಿರು ಹೀಗೆ ವಿವಿಧ ಬಗೆ ಬಗೆಯ ಗಿಡಮರಗಳನ್ನು ಬೆಳೆಯಲಾಗಿದೆ.ಪ್ರಶಾಂತ ಪಿ.ಕೆ ಎಂ, ಡಿ.ಎಫ್ .ಓ ಸಾಮಾಜಿಕ ಅರಣ್ಯವಲಯ ಅಧಿಕಾರಿ, ವಿಜಯಪೂರ