ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ: ಶಾಸಕ ಶಿವಾನಂದ ಪಾಟೀಲ
2022-23ನೇ ಸಾಲಿನ ಆದರ್ಶ ಶಿಕ್ಷಕ  ಪ್ರಶಸ್ತಿ ಪ್ರದಾನ ಸಮಾರಂಭ
ಬಸವನಬಾಗೇವಾಡಿ:ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಅಂತಹ ಶಿಕ್ಷಕರಲ್ಲಿ ಆದರ್ಶ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುವ ಮೂಲಕ ಶಿಕ್ಷಕರಿಗೆ ಪ್ರೋತ್ಸಾ ಹಿಸುವ ಕಾರ್ಯ ಮಾಡುತ್ತಿರುವ ಆದರ್ಶ ಶಿಕ್ಷಕರ ವೇದಿಕೆಯ ಕಾರ್ಯ ಶ್ಲಾಘನೀಯ ವಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಸವ ಭವನದಲ್ಲಿ ಆದರ್ಶ ಶಿಕ್ಷಕರ ವೇದಿಕೆ ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ 2022-23ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಉಪನ್ಯಾಸ ಹಾಗೂ ಸನ್ಮಾನ ಸಮಾ ರಂಭದ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು ವಿದ್ಯ ಎನ್ನುವುದು ದೇಶದ ಆದಾರ ಸ್ಥಂಭ, ಪ್ರತಿಯೊಬ್ಬರು ಸಮಾಜ ದಲ್ಲಿ ಬದುಕು ಕಟ್ಟಿಕೊಳ್ಳುವಲ್ಲಿ ಹಣ ಎಷ್ಟು ಅವಶ್ಯವೂ ಅದರೊಂದಿಗೆ ಶಿಕ್ಷಣವು ಅಷ್ಠೆ ಪ್ರಮುಖವಾಗಿದೆ.
ಪ್ರತಿಯೊಂದು ರಂಗದಲ್ಲಿಯೂ ಶಿಕ್ಷಕರ ಕೊಡುಗೆ ಇದೆ ಶಿಕ್ಷಕರ ಬಗ್ಗೆ ಯಾವುದೇ ಬೇದ ಮಾಡದೆ ಎಲ್ಲರನ್ನು ಸಮಾನಾಗಿ ಕಾಣುವಲ್ಲಿ ಸಕರ್ಾರಗಳು ಎಚ್ಚರ ವಹಿಸಬೇಕು, ಅಲ್ಲದೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಸಕರ್ಾರ ಗಮನ ಹರಿಸಬೇಕು ಎಂದರು.
ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ ವೃತ್ತಿಗಳಲ್ಲಿ ಅತಿ ಶ್ರೇಷ್ಠವಾದ ಪವಿತ್ರವಾದ ಹುದ್ದೆ ಯಾವುದಾರೂ ಇದ್ದರೆ ಅದು ಶಿಕ್ಷಕ ವೃತ್ತಿ, ಶಿಕ್ಷಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಕರ್ಾರದಿಂದ ಸಿಗಬೇಕಾದ ಸೌವಲತ್ತುಗಳನ್ನು ಒದಗಿಸುವಲ್ಲಿ ಸಕರ್ಾರದ ಮೇಲೆ ಒತ್ತಡ ತರುವ ಮೂಲಕ ನಿಮ್ಮ ಬೇಡಿಕೆಯನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಕ,ರಾ,ಪ್ರಾ, ಶಾ, ಶಿ, ಸಂಘದ ರಾಜ್ಯದ್ಯಕ್ಷ ಶಂಭುಲಿಂಗಗೌಡ ಪಾಟೀಲ,ಕನರ್ಾಟಕ ಸಹಕಾರ ಮಹಾಮಂಡಳ ನಿದರ್ೇಶಕ ಈರಣ್ಣ ಪಟ್ಟಣಶೆಟ್ಟಿ, ಶಿಕ್ಷಕ ಎಚ್,ಬಿ ಬಾರಿಕಾಯಿ, ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಗಳು ಮಾತನಾಡಿದರು. ಪುರಸಭೆ ಅಧ್ಯಕ್ಷ ರೇಖಾ ಬೆಕಿನಾಳ,  ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ,  ತಾಲೂಕಾ ಅಧ್ಯಕ್ಷ ಎಂ,ಎನ್ ಯಾಳವಾರ, ಚಂದ್ರಶೇಖರ ನುಗ್ಗಿ, ಸುರೇಶ ಶೆಡಶ್ಯಾಳ, ಶಂಕರಗೌಡ ಬಿರಾದಾರ, ಬಿ,ಕೆ, ಕಲ್ಲೂರ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು.
ಬಿ.ವಿ.ಗಬ್ಬೂರ ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ, ಗಿರಿಜಾ ಪಾಟೀಲ ನಿರೂಪಿಸಿದರು.