ಸಹಕಾರಿ ಸಂಘಗಳ ಕೊಡುಗೆ ಬಹುಮುಖ
ಬಸವನಬಾಗೇವಾಡಿ:ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಬಹುಮುಖ ವಾಗಿದೆ ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ ಬೆಂಗಳೂರ ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ವಿಜಯಪುರ ಸಹಕಾರಿ ಇಲಾಖೆ ವಿಜಯಪುರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಯರನಾಳ ಇವರ ಸಂಯುಕ್ತ ಆಶ್ರಯದಲ್ಲಿ ೬೯ ಅಖಿಲ ಭಾರತ ಸಹಕಾರಿ ಸಪ್ತಾ ಅಂಗವಾಗಿ ಯುವಜನ, ಮಹಿಳೆ, ಅಬಲ ವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ಕಾರ್ಯಕ್ರಮದ ಉದ್ಘಾಟನಾ ನೆರವೇರಿಸಿ ಮಾತನಾಡಿದರು.
ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಹಕಾರಿ ರಂಗದ ಪಾತ್ರ ಪ್ರಮುಖವಾಗಿದೆ ಸಹಕಾರಿ ಚಳುವಳಿಯ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಸಹಕಾರಿ ಸಂಘಗಳು ಗ್ರಾಮೀಣಾಭಿವೃದ್ಧಿಯಲ್ಲಿ ಬಹುಮುಖ್ಯ ಕೊಡುಗೆ ನೀಡಿವೆ ಎಂದು ಹೇಳಿದರು.
ಮಹಿಳೆಯರು ಸ್ವಾವಲಾಂಭಿಯಾಗಿ ಬದುಕಲು ಸಹಕಾರಿ ಸಂಘಗಳ ಮೂಲಕ ಹೈನುಗಾರಿಗೆ, ಸ್ವಯಂ ಉದ್ಯೋಗ ಸೇರಿದಂತೆ ಅನೇಕ ಉದ್ಯೋಗಳನ್ನು ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಸದುಪಯೋಗವನ್ನು ಪಡೆದುಕೊಂಡು ಮಹಿಳೆಯರು ಸಹಕಾರಿ ಸಂಘಗಳಿ0ದ ಸರ್ಕಾರದ ಸಹಾಯ ಧನ ಪಡೆದುಕೂಂಡು ಸಮಾಜದಲ್ಲಿ ಸ್ವಾವಲಂಬಿಯಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಯರನಾಳ ವಿರಕ್ತಮಠದ ಸಂಗನಬಸವ ಶ್ರೀಗಳು ಮಾತನಾಡಿ ಸಹಕಾರಿ ಸಂಘಗಳು ರೈತರ ಬೆನ್ನೆಲೂಬು ವಾಗಿ ನಿತ್ತು ರೈತಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರನ್ನು ಆರ್ಥಿಕವಾಗಿ ಮುಂದೆ ಬರಲು ಸಹಕಾರವಾಗಬೇಕು ಎಂದು ಹೇಳಿದರು.ಪ್ರತಿಯೊಂದು ಸಹಕಾರಿ ಸಂಘಗಳು ಮೂರು ನಿಯಮಗಳನ್ನು ಪಾಲಿಸಬೇಕು. ಸಹಕಾರಿ ಮಾರಾಟ ಸಂಸ್ಕರಣ ಮತ್ತು ಶೇಖರಣ ಮೂಲಕ ಸಹಕಾರಿ ಸಂಘಗಳು ಬೆಳೆಯಬೇಕು. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ನಿನ ಉಪಾಧ್ಯಕ್ಷ ಸಂಗನಬಸಪ್ಪಾ ತಳೆವಾಡ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕಿ ರಾಜೇಶ್ವರಿ ಹೆಬ್ಬಾಳ, ಯರನಾಳ ಗ್ರಾ.ಪಂ. ಅಧ್ಯಕ್ಷ ಬಸವರಾಜ ಜಾಲಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾದ್ಯಕ್ಷ ಈರಪ್ಪಾ ನರಗುಂದ, ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀಶೈಲ ಹಂಗರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಿ.ಸಿ.ಸಿ.ಬ್ಯಾಂಕಿನ ನಿವೃತ್ತ ಅಧಿಕಾರಿ ಆರ್. ಎಮ್. ಬಣಗಾರ ಯುವಜನ ಮಹಿಳೆ ಅಬಲವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಿಟ್ಟಿನಹಳ್ಳಿ ಬಸವರಾಜ ಬಿರಾದಾರವರು ಸಾವಯವ ಕೃಷಿ ಪದ್ದತಿ ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.