ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ ಕೆಲ ನಿಶ್ಚಿತ ಠೇವಣಿಗಳ ಬಡ್ಡಿದರ ಹೆಚ್ಚಳ
ಶೇ.8 ಮತ್ತು ಹಿರಿಯ ನಾಗರಿಕರಿಗೆ ಶೇ.8.75ರವರೆಗೆ ಬಡ್ಡಿದರ ಕೊಡುಗೆ
ಬೆಂಗಳೂರು:ಪ್ರಮುಖಾಂಶಗಳು:• ನಿಯಮಿತ ಗ್ರಾಹಕರಿಗೆ ಹೆಚ್ಚಿನ ಬಡ್ಡಿದರ 80 ವಾರಗಳಿಗೆ ಶೇ.8(560 ದಿನಗಳು)• ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರ 80 ವಾರಗಳಿಗೆ ಶೇ.8.75(560 ದಿನಗಳು)• ಪ್ಲಾಟಿನಾ ಎಫ್.ಡಿ. ಹೆಚ್ಚುವರಿ ಬಡ್ಡಿದರ ಶೇ.0.20ರಷ್ಟು ಪಡೆಯುತ್ತದೆ. ಇವುಗಳು ರೂ.15 ಲಕ್ಷಗಳು ಮತ್ತು ಮೇಲ್ಪಟ್ಟು ಹಾಗೂ ರೂ.2 ಕೋಟಿಗಳಿಗಿಂತ ಕಡಿಮೆ ಮೊತ್ತಕ್ಕೆ ಅನ್ವಯಿಸುತ್ತವೆ.
ಉಜ್ಜೀವನ್ ಎಸ್.ಎಫ್.ಬಿ.ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಇಟ್ಟಿರ ಡೇವಿಸ್ , “ಎಫ್.ಡಿ. ಬೆಲೆ ಹೆಚ್ಚಳವು ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನಗಳನ್ನು ನೀಡುವ ನಮ್ಮ ಬದ್ಧತೆಯ ಮರು ದೃಢೀಕರಣವಾಗಿದೆ. ಇದು ಕಣ ಕಣ ಠೇವಣಿಗಳನ್ನು ನಿರ್ಮಿಸುವ ಹಾಗೂ ವಿಕಾಸಗೊಳ್ಳುತ್ತಿರುವ ಕಿರು-ಆರ್ಥಿಕತೆಯ ಸನ್ನಿವೇಶ ನಿರ್ಮಿಸುವ ರೀಟೇಲ್ ಕಾರ್ಯತಂತ್ರಕ್ಕೆ ಪೂರಕವಾಗಿಯೂ ಇದೆ” ಎಂದರು.
ಹೊಸ ದರಗಳು ನವೆಂಬರ್ 5, 2022ರಿಂದ ಪರಿಣಾಮಕಾರಿಯಾಗಿರುತ್ತವೆಕ್ರ.ಸಂ. ಅವಧಿ ಪ್ರಸ್ತುತದ ದರಗಳು ಪರಿಷ್ಕೃತ ದರಗಳು1 80 ವಾರಗಳು (560 ದಿನಗಳು) 7.20% 8.00%2 990 ದಿನಗಳು 7.50% 7.75%3 12 ತಿಂಗಳು1 ದಿನದಿಂದ 559 ದಿನಗಳು 7.20% 7.50%4 561 ದಿನಗಳಿಂದ 989 ದಿನಗಳು 7.00% 7.50%5 991 ದಿನಗಳಿಂದ 60 ತಿಂಗಳು 7.00% 7.20%6 60 ತಿಂಗಳಿಂದ 1ದಿನದಿಂದ 120 ತಿಂಗಳು 6.00% 6.50%
ಗ್ರಾಹಕರು ಈ ಪ್ಲಾನ್ ಅಡಿಯಲ್ಲಿ ₹15 ಲಕ್ಷಗಳು ಮೇಲ್ಪಟ್ಟು ₹ಕೋಟಿಗಳವರೆಗೆ ಈ ಪ್ಲಾನ್ ಅಡಿಯಲ್ಲಿ ಹೂಡಿಕೆ ಮಾಡಬಹುದು. ಪ್ಲಾಟಿನಾ ಎಫ್.ಡಿ.ನಾನ್-ಕಾಲಬಲ್ , ಅಂದರೆ ಅವಧಿಪೂರ್ವ ಹಿಂಪಡೆಯುವಿಕೆ ಈ ಯೋಜನೆಯಲ್ಲಿ ಸಾಧ್ಯವಿಲ್ಲ.
ಉಜ್ಜೀವನ್ ಎಸ್.ಎಫ್.ಬಿ.ಯು ಮಾಸಿಕ, ತ್ರೈಮಾಸಿಕ ಹಾಗೂ ಮೆಚ್ಯುರಿಟಿಯಲ್ಲಿ ಬಡ್ಡಿ ಪಾವತಿಯ ಆಯ್ಕೆಗಳನ್ನು ನೀಡುತ್ತದೆ. ಟ್ಯಾಕ್ಸ್ ಸೇವರ್ ಫಿಕ್ಸ್ಡ್ ಡಿಪಾಸಿಟ್ ಗಳು ಐದು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತವೆ.
ಎಫ್.ಡಿ.ಗಳ ಮೇಲೆ ಹೊಸ ಸುತ್ತಿನ ಬೆಲೆ ಹೆಚ್ಚಳವು ಉಜ್ಜೀವನ್ ಎಸ್.ಎಫ್.ಬಿ.ಯನ್ನು ಸಾವಧಿ ಠೇವಣಿಗಳಿಗೆ ಅತ್ಯಂತ ಹೆಚ್ಚು ಬಡ್ಡಿದರಗಳನ್ನು ನೀಡುವ ಬ್ಯಾಂಕ್ ಗಳ ಸಾಲಿನಲ್ಲಿ ನಿಲ್ಲಿಸಿದೆ.