ಎದೆ ಉರಿಗೆ ಇಲ್ಲಿದೆ ವೈದ್ಯರ ಸಲಹೆ
ಡಾ ಗಣೇಶ್ ಶೆಣೈ.ಕೆ, ಹಿರಿಯ ಸಲಹೆಗಾರ, ಜಿಐ ಮತ್ತು ಬಾರಿಯಾಟ್ರಿಕ್ ಸರ್ಜರಿ, ಫೋರ್ಟಿಸ್ ಆಸ್ಪತ್ರೆ,
ಇಂದಿನ ಜೀವನ ಶೈಲಿಯಿಂದ ಸಾಕಷ್ಟು ಜನರಿಗೆ ಎದೆ ಉರಿ ಸರ್ವೇ ಸಾಮಾನ್ಯವಾಗಿದೆ. ಊಟ ತಿಂದ ಬಳಿಕ ತಿಂದ ಆಹಾರ ಜೀರ್ಣವಾಗದೇ ಹುಳಿತೇಗು ಬರುವುದು ಎಂಥವರಿಗೂ ಸಮಸ್ಯೆ ಎನಿಸುತ್ತದೆ. ಈ ಹುಳಿ ತೇಗು, ಎದೆಉರಿಯನ್ನು ಆಸಿಡ್‌ ರಿಫ್ಲೆಕ್ಸ್‌ ಎಂದೂ ಕರೆಯಲಾಗುತ್ತದೆ.
ಆಸಿಡ್ ರಿಫ್ಲಕ್ಸ್‌ಗೆ ಕಾರಣಗಳು:ಹಿಯಾಟಲ್ ಹರ್ನಿಯಾ ಎಂದು ಕರೆಯಲ್ಪಡುವ ಹೊಟ್ಟೆಯ ಅಸಹಜತೆಯು ಆಸಿಡ್ ರಿಫ್ಲಕ್ಸ್‌ಗೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಹೊಟ್ಟೆಯ ಮೇಲಿನ ಭಾಗ ಮತ್ತು ಅನ್ನನಾಳದ ಸ್ಪಿಂಕ್ಟರ್ () ಡಯಾಫ್ರಾಮ್ ಮೇಲೆ ಚಲಿಸಿದಾಗ ಈ ಉರಿ ಉಂಟಾಗುತ್ತದೆ, ಹೀಗಾಗಿ ಹೊರಗಡೆ ಹೈಜಿನ್‌ ಇಲ್ಲದ ಕಡೆ ಊಟ ಮಾಡುವುದು, ಬೊಜ್ಜು, ಮಲಗುವ ಸಮಯದಲ್ಲಿ ತಿಂಡಿ, ಧೂಮಪಾನ, ಪುದೀನ, ಬೆಳ್ಳುಳ್ಳಿ, ಈರುಳ್ಳಿ ಅಥವಾ ಕೊಬ್ಬಿನ ಆಹಾರಗಳನ್ನು ತಿನ್ನುವುದರಿಂದ ಈ ರೀತಿಯ ಹುಳಿ ತೇಗು ಬರಲಿದೆ.
ಕೆಲವೊಮ್ಮೆ ಈ ರೀತಿಯ ಹುಳಿ ತೇಗನ್ನು ಜನರು ನಿರ್ಲಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ಇದು ಅತಿರೇಖಕ್ಕೆ ತಿರುಗಿ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಜೊತೆಗೆ ಅತಿಯಾದ ಗ್ಯಾಸ್ಟ್ರೀಕ್‌ ಅಥವಾ ಎದೆ ಉರಿಗೂ ಕಾರಣವಾಗಬಹುದು. ನಿರಂತರ ಕೆಮ್ಮು, ಅಸ್ತಮಾ, ಕಫಾದಂತ ಸಮಸ್ಯೆಯೂ ಆಗಬಹುದು. ಹುಳಿತೇಗಿನ ಸಮಸ್ಯೆ ವಾರದಲ್ಲಿ ಎರಡು ಭಾರಿ ನಿರಂತವರವಾಗಿದ್ದರೆ, ಅದನ್ನು ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡುವುದು ಒಳಿತು.
ಚಿಕಿತ್ಸೆ ಏನು?ಪದೇ ಪದೇ ಈ ಸಮಸ್ಯೆ ಆಗುತ್ತಿದ್ದರೆ ಎಂಡೋಸ್ಕೋಪಿ ಮೂಲಕ  ಮಾನಿಟರಿಂಗ್ ಮಾಡಿ, ಅನ್ನನಾಳದಲ್ಲಿ ಆಮ್ಲದ ಮಟ್ಟವನ್ನು ಪರಿಶೀಲಿಸ ಬಹುದು. ಅನ್ನನಾಳದ ಮಾನೋಮೆಟ್ರಿಯು ಅನ್ನನಾಳ ಮತ್ತು ಕೆಳ ಅನ್ನನಾಳದ ಸ್ಪಿಂಕ್ಟರ್‌ನ ಕಾರ್ಯ ಮತ್ತು ಚಲನೆಯನ್ನು ಪರಿಶೀಲಿಸಬಹುದು. ಇದಲ್ಲದೇ, ಜೀವನ ಶೈಲಿಯನ್ನು ಸುಧಾರಿಸುವ ಅವಶ್ಯಕತೆ ಇದೆ. ಸರಿಯಾದ ಸಮಯಕ್ಕೆ ಊಟ ಮಾಡುವುದು, ಉಳಿತೇಗಿಗೆ ಕಾರಣವಾಗುವ ಆಹಾರದ ಮೇಲೆ ನಿಯಂತ್ರಣ ಹಾಕಿಕೊಳ್ಳುವುದು ಮಾಡುವುದು ಉತ್ತಮ.
ಹೊಟ್ಟೆಯಿಂದ ಆಮ್ಲವನ್ನು ತಟಸ್ಥಗೊಳಿಸಲು ಸಹಾಯ ಮಾಡುವ ಆಂಟಾಸಿಡ್‌ಗಳ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಇದರಿಂದಲೂ ನಿಯಂತ್ರಣವಾಗದೇ ಇದ್ದಾಗ ಫಂಡಪ್ಲಿಕೇಶನ್‌ನಂತಹ ಶಸ್ತ್ರಚಿಕಿತ್ಸಾ ಮಾಡಿಸುವ ಅವಶ್ಯಕತೆ ಇದೆ.