ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ದಿಶೇಯಲ್ಲಿ ಸಾಗುತ್ತಿರುವುದು ಸ್ವಾಗತಾರ್ಹ
ಇಂಡಿ:ಶಿಕ್ಷಣ ಎಂದರೆ ಮಕ್ಕಳಲ್ಲಿ ಅಡಗಿರುವ ಸುಪ್ತ ಶಕ್ತಿ ಹೊರಗೆಳೆಯುವುದೇ ಶಿಕ್ಷಣವಾಗಿದ್ದು ಇಂದು ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ದಿಶೇಯಲ್ಲಿ ಸಾಗುತ್ತಿರುವುದು ಸ್ವಾಗತಾರ್ಹ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ, ಹಡಪದ ಅಪ್ಪಣ ಪ್ರಾಥಮಿಕ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಭಾಗ ಸಮಗ್ರ ಅಭಿವೃದ್ದಿ ಜೊತೆಗೆ ಹೊಸದಿಕ್ಕಿನತ್ತ ಸಾಗಿದೆ. ಶೆ.ನೂರಕ್ಕೆ ೯೦ರಷ್ಟುç ಪ್ರತಿಶತ ಮತು ಕೊಟ್ಟಂತೆ ನಡೇದುಕೊಂಡಿರುವೆ. ದಿ.ಅಪ್ಪಾಸಾಬ ನಾವಿ ನಮ್ಮ ಪಕ್ಷದ ಅತ್ಯಂತ ಒಳ್ಳೇಯ ಆದರ್ಶ ವ್ಯಕ್ತಿ ಈ ಸಂಸ್ಥೆಯ ಬಗ್ಗೆ ಸಾಕಷ್ಟು ಕನಸು ಕಂಡವರಲ್ಲಿ ಅವರೂ ಕೂಡಾ ಒಬ್ಬರು ನೈಜ ಬದುಕು ಸಾಗಿಸುವ ಹೃದಯವಂತ ಸಮಾಜ ನಿಮ್ಮದ್ದು ನನ್ನ ಮೇಲೆ ಸಾಕಷ್ಟು ಹಕ್ಕಿದೆ ಈ ಸಂಸ್ಥೆಗೆ ನೀವು ಬೇಡಿರುವ ಬೇಡಿಕೆ ಅನುಧಾನ ಅನುಪಾತದ ಮೇಲೆ ಸಾಧ್ಯವಾದಷ್ಟು ಸಹಾಯ ಮಾಡುವ ಭರವಸೆ ನೀಡಿದರು.
ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಎರ್ಪಡಿಸುವ ಉದ್ದೇಶ ಮಕ್ಕಳಲ್ಲಿ ಅಡಗಿರುವ ಸುಪ್ತ ಶಕ್ತಿ ಹೊರಗೆಳೆಯುವ ಉದ್ದೇಶವಾಗಿದೆ. ಶಿಕ್ಷಣ ಎಂದರೆ ಕೇವಲ ಪಾಠ ಬೋದನೆ ಮಾಡಿದರೆ ಸಾಲದು ಮಕ್ಕಳಿಗೆ ವಿವಿಧ ವಿಧದಲ್ಲಿ ಅಭಿವೃದ್ದಿಪಡಿಸುವುದಾಗಿದೆ. ಇಂದು ಸರಕಾರಿ, ಅರೇಸರಕಾರಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶ್ರಮಿಸುತ್ತಿವೆ. ಪ್ರಾಚೀನ ಕಾಲದಲ್ಲಿ ಗುರುಗಳನ್ನು ದೇವರ ಸ್ಥಾನದಲ್ಲಿಟ್ಟ ಪೂಜಿಸುತ್ತಿದ್ದರು ಇಂದಿಗೂ ಗುರುಪರಂಪರೆಗೆ ಮಹತ್ವ ಸ್ಥಾನವಿದೆ.
ಸ್ಫರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ವಿಶ್ವಮಟ್ಟದಲ್ಲಿ ಕೊಂಡ್ಯೋಯುವ ಕೆಲಸ ನಡೆಯಬೇಕು. ಭಾರವಾದ ಬ್ಯಾಗಗಳಿಂದ ಶೈಕ್ಷಣಿಕ ಪ್ರಗತಿ ಅಸಾಧ್ಯೆ ಮಕ್ಕಳಿಗೆ ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳುವಂತ ವಾತಾವರಣ ನಿರ್ಮಿಸಬೇಕು. ಮುಂದು ವರೇದ ರಾಷ್ಟçಗಳು ಶಿಕ್ಷಣ ನೀತಿ ನಿಸರ್ಗವೇ ಶಿಕ್ಷಣ ಎಂದು ಆಡುತ್ತಾ ಕಲಿ ನೋಡುತ್ತಾ ಕಲಿಕೆ ಪ್ರಾರಂಭಿಸಿವೆ. ಸರಕಾರಗಳು ಯಾವ ಪ್ರದೇಶದಲ್ಲಿ ಎಂತಹ ಶಿಕ್ಷಣ ನೀಡಬೇಕು ಇಂದಿನ ಹೊಸ ಶಿಕ್ಷಣ ನೀತಿ ಲೋಪದೋಷವಾಗಿದೆ ಶಿಕ್ಷಣ ತಜ್ಞರ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪಾಲಕ ಪೋಷಕರು ಮಕ್ಕಳನ್ನು ಕೇವಲ ಡಾಕ್ಟರ್ , ಇಂಜಿನಿಯರ್ ಮಾಡುವ ಕನಸು ಕಾಣಬಾರದು ಒಳ್ಳೇಯ ನಾಗರೀಕ ಉತ್ತಮ ದೇಶಪ್ರೇಮಿಯಾಗಲಿ ಎಂಬ ವಿಚಾರವಿರಲಿ ಎಂಬ ಸಂದೇಶ ನೀಡಿದರು.
ಪುರಸಭೆ ಅಧ್ಯಕ್ಷೆ ಬನ್ನೇಮ್ಮಾ ಹದರಿ, ಶಿಕ್ಷಣಾಧಿಕಾರಿ ವಸಂತ ರಾಠೋಡ, ಭೀಮಣ್ಣಾ ಕೌಲಗಿ, ಜಾವೀದ ಮೋಮಿನ,ಪ್ರಶಾಂತ ಕಾಳೆ, ಸತೀಶ ಕುಂಬಾರ, ಸಂಸ್ಥೆಯ ಅಧ್ಯಕ್ಷ ಸಿದ್ದು ನಾವಿ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರ ನಡಗಡ್ಡಿ, ಎಸ್.ಎ ಹಿಪಲಿ, ಎಸ್.ಡಿ ಹಿಪ್ಪರಗಿ,ಎಸ್.ಬಿ ಪಾಟೀಲ, ಎಂ.ಎಸ್ ಚವ್ಹಾಣ, ಸಂತೋಷ ಪಾಟೀಲ, ಎ.ಓ ಹೂಗಾರ, ಎಸ್.ವ್ಹಿ ಹರಳಯ್ಯಾ, ಶಿವುಕುಮಾರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ, ಹಡಪದ ಅಪ್ಪಣ್ಣ ಶಾಲೆಯ ಆಡಳಿತಾಧಿಕಾರಿಗಳು , ಮುಖ್ಯಗುರುಗಳು ಉಪಸ್ಥಿತರಿದ್ದರು.ಶ್ರೀಧರ ನಡಗಡ್ಡಿ ಸ್ವಾಗತಿಸಿ, ಬಸವರಾಜ ಗೋರನಾಳ ಕಾರ್ಯಕ್ರಮ ನಿರೂಪಿಸಿ, ಬಿ.ಆರ್.ಪಿ ಆಯ್.ಜಿ ಅಳೂರ ವಂದಿಸಿದರು.
*
ಸ್ವಾತಂತ್ರö್ಯ ನಂತರದ ದೇಶವಾಳಿನ ಎಲ್ಲಾ ಸರಕಾರಗಳು ಯಾವ ಉದ್ದೇಶಕ್ಕೆ ಯೋಜನೆಗಳು ಒತ್ತು ಕೊಡಬೇಕಾಗಿತ್ತು ಕೊಟ್ಟಿಲ್ಲ. ವಿಧಾನಸಭೆ, ,ಲೋಕಸಭೆ ಭವಿಷ್ಯ ರೂಪಿಸುವ ಕೇಂದ್ರಗಳು ಒಳ್ಳೇಯ ವಿಚಾರಗಳು ನಡೇಯಬೇಕು ಆದರೆ ಒಳ್ಳೇಯ ವಿಷಯಗಳು ಪ್ರಸ್ತಾಪಿಸದೆ ಬೇರೆ ಬೇರೆ ದಿಕ್ಕಿನತ್ತ ಸಾಗುತ್ತಿರುವುದು ವಿಷಾದನೀಯ. ಸರಕಾರಗಳು ಪ್ರಮುಖವಾಗಿ ಶಿಕ್ಷಣ ,ಆರೋಗ್ಯದ ಕಡೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.ಶಾಸಕ ಯಶವಂತರಾಯಗೌಡ ಪಾಟೀಲ.