ಅನುದಾನ ಹಂಚಿಕೆಯಲ್ಲಿ ತಾರತಮ್ಯ ಕೈ ಮತ್ತು ಕಮಲ ಸದಸ್ಯರ ನಡುವೆ ವಾಗ್ವಾದ ಸಭೆ ಮುಂದೂಡಿಕೆ
ಹರಪನಹಳ್ಳಿ:ಪಟ್ಟಣದ ವಿವಿಧ ವಾರ್ಡ್ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಆರೋಪದ ಹಿನ್ನೆಲೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಾಮಕಿ ನಡೆದು, ಕೈ, ಕೈ, ಮಿಲಾಯಿಸುವ ಹಂತಕ್ಕೆ ತಲುಪಿ ಕೈ ಮತ್ತು ಕಮಲ ಸದಸ್ಯರ ನಡುವೆ ವಾಗ್ವಾದ ಗದ್ದಲಕ್ಕೆ ಕಾರಣವಾಯಿತು.
ಈ ಸಭೆಯಲ್ಲಿ ಸದಸ್ಯ ಎಂ.ವಿ.ಅ0ಜಿನಪ್ಪ ಮಾತನಾಡಿ ಶಾಸಕರು ಹಾಜರಿದ್ದ ಹಿಂದಿನ ಸಭೆಯಲ್ಲಿ ಎಲ್ಲಾ ಸದಸ್ಯರುಗಳನ್ನು ವಿಶ್ವಾಸಕ್ಕೆ ಪಡೆದು ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಕಳುಹಿಸಿ ಕೊಡಿ ಎಂದು ಸಲಹೆ ನೀಡಿದ್ದೀರಿ ಎಂದು ದೂರಿದರು.
ಅಧ್ಯಕ್ಷರು ಸಭೆಯಲ್ಲಿ ಕೆಲ ಸದಸ್ಯರ ವಿಶ್ವಾಸ ಪಡೆದು ಹಾಗೂ ಸಭೆಯಲ್ಲಿ ಚರ್ಚೆ ನಡೆಸದೆ ಏಕಪಕ್ಷೀಯ ನಿರ್ಣಯ ಮಾಡಿಕ್ರಿಯಾ ಯೋಜನೆ ತಾಯಾರಿಸಿ ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಕಳುಹಿಸಿದ್ದೀರಿ ಎಂದು ಸದಸ್ಯರಾದ ಟಿ.ವೆಂಕಟೇಶ್ ಹಾಗೂ ಡಿ.ಅಬ್ದುಲ್ ರೆಹಿಮಾನ್ ಸಾಬ್ ದ್ವನಿ ಗೂಡಿಸಿದರು.
ಸದಸ್ಯೆ ಚಿಕ್ಕೆರಿ ಹನುಮಕ್ಕ ಮಾತನಾಡಿ ಇದುವರೆಗೂ ನಮ್ಮ ವಾರ್ಡಿಗೆ ಯಾವುದೇ ಅನುದಾನ ನೀಡಿಲ್ಲ ನಮ್ಮನ್ನ ಕೇವಲ ಚಹಾ ಮತ್ತು ಉಪಹಾರಕ್ಕೆ ಸೀಮಿತಗೊಳಿಸಿದ್ದೀರಿ ಎಂದು ಆರೋಪಿಸಿದರು ಆಗ ಸದಸ್ಯರಾದ ಜಾಕೀರ್ ಹುಸೇನ್ ಸರ್ಖಾವಾಸ್, ದ್ಯಾಮಜ್ಜಿ ರೊಕ್ಕಪ್ಪ, ಲಕ್ಕಮ್ಮ, ಸಹಿರಾಬಿ, ಜೋಗಿನರ ಭರತೇಶ್ ದ್ವನಿಗೂಡಿಸಿ ೨೦೧೯ ರಿಂದ ಇಲ್ಲಿಯವರೆಗೂ ನಮ್ಮ ವಾರ್ಡಿಗೆ ಒಂದು ರೂಪಾಯಿ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಸದಸ್ಯರ ನಡುವೆ ಪರಸ್ಪರ ವಾದ ವಿವಾದಗಳು ನಡೆದು ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿದ್ದಂತೆ ಅಧ್ಯಕ್ಷ ಹೆಚ್.ಎಂ.ಹರಾಳು ಅಶೋಕ್ ಹಾಗೂ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಧ್ಯ ಪ್ರವೇಶಿ ಸಮಾಧಾನಪಡಿಸಿ ವಾತವರಣವನ್ನು ತಿಳಿ ಗೊಳಿಸಿದರು.
Àದಸ್ಯರ ಒಮ್ಮತದಿಂದ ೨೦೧೯ ರಿಂದ ಇಲ್ಲಿಯ ವರೆಗೂ ಯಾವ ಯಾವ ವಾರ್ಡುಗಳಿಗೆ ಎಷ್ಟೆಷ್ಟು ಅನುಧಾನ ಮಂಜೂರು ಮಾಡಲಾಗಿದೆ, ಎಂದು ಮುಂದಿನ ಸಭೆಗೆ ತಂದು ಸಾಮಾಜಿಕ ನ್ಯಾಯದಡಿ ಎಲ್ಲಾ ವಾರ್ಡ್ಗಳಿಗೆ ಅನುದಾನ ಹಂಚಿಕೆ ಮಾಡಬೇಕು ಎಂದು ಎಲ್ಲಾ ಸದಸ್ಯರು ಒಮ್ಮತದಿಂದ ತಿಳಿಸಿದಾಗ, ಸಭೆಯನ್ನು ಅಧ್ಯಕ್ಷರು ಮುಂದೂಡಿದರು.
ಸಭೆಯಲ್ಲಿ ಉಪಾದ್ಯಕ್ಷ ನಿಟ್ಟೂರು ಭೀಮವ್ವ, ಪುರಸಭೆ ಮಾಜಿ ಅಧ್ಯಕ್ಷ ಮಂಜನಾಥ್ ಇಂಜತ್ಕರ್, ಹೆಚ್. ಕೊಟ್ರೇಶ್, ರಾಘವೇಂದ್ರ ಶೆಟ್ಟಿ, ಜಾವೀದ್, ಗೊಂಗಡಿ ನಾಗರಾಜ್, ಗಣೇಶ್, ಸದಸ್ಯರು ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.