ಘರ್ಜಿಸಿದ ಜೆಸಿಬಿ
ಕೊಲ್ಹಾರ:ಪಟ್ಟಣದಲ್ಲಿ ಅಕ್ರಮ ಒತ್ತುವರಿ ಕಟ್ಟಡಗಳ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.
ಪಟ್ಟಣ ಪಂಚಾಯತ್ ಕಾರ್ಯಾಲಯದ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ ಅಕ್ರಮ ಒತ್ತುವರಿ ಎಂದು ಪರಿಗಣಿಸಿದ್ದ ಬಹುತೇಕ ಕಟ್ಟಡಗಳನ್ನು ತೆರವುಗೊಳಿಸಲಾಯಿತು.
ಪ ಪಂ ಆಡಳಿತಾಧಿಕಾರಿ ತಹಶಿಲ್ದಾರ ಪಿ ಜಿ ಪವಾರ್ ಹಾಗೂ ಪ ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ ನೇತೃತ್ವದಲ್ಲಿ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಿಂದ ಆಜಾದ್ ನಗರದವರೆಗೆ ಬಿಗಿ ಪೊಲೀಸ್ ಬಂದೊಬಸ್ತನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.ಪಿಎಸ್ಐ ಪ್ರೀತಮ್ ನಾಯಕ ಪೊಲೀಸ್ ಬಂದೋಬಸ್ತ ಹಮ್ಮಿಕೊಂಡಿದ್ದರು.