ಜಾತ್ರಾ ಮಹೋತ್ಸವ, ಶ್ರೀಗಳ ತುಲಾಭಾರ ಕಾರ್ಯಕ್ರಮ
ಕೊಲ್ಹಾರ:ಬಾಲ್ಯದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಉತ್ತಮ ಪ್ರಜೆ ಯಾಗಿ ನಿರ್ಮಾಣ ಮಾಡುವಲ್ಲಿ ತಾಯಿ ಪಾತ್ರ ಮಹತ್ವದ್ದು ಎಂದು ವಿಜಯ ಮಹಾಂತೇಶ್ವರ ತೀರ್ಥ ಮಠದ ಡಾ.ಬಸವಲಿಂಗ ಮಹಾಸ್ವಾಮಿಗಳು ಹೇಳಿದರು
ಮಸೂತಿ ಮೂಲ ಸಂಗನಬಸವ ಶಿವಯೋಗಿಗಳ(ಗಿಡ್ಡಯ್ಯಜ್ಜನ)ಜಾತ್ರಾ ಧರ್ಮಸಭೆ ಹಾಗೂ ಅಭಿನವ ಅಲ್ಲಮ ಕೃತಿ ಲೋಕಾ ರ್ಪಣೆಗೊಳಿಸಿ ಮಾತನಾ ಡಿದರು. ಶರಣರ ವಚನಗಳನ್ನು ಓದಿಸಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಬಂಥನಾಳ ಸಂಗನ ಬಸವ ಶಿವಯೋಗಿಗಳ ಈ ಭಾಗದಲ್ಲಿ ಶಿಕ್ಷಣ,ಸೇರಿದಂತೆ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದೇಶದ ಕಂಡ ಶ್ರೇಷ್ಠ ಶಿವಯೋಗಿಗಳು ಎಂದರು.
ಅಧ್ಯಕ್ಷತೆವಹಿಸಿದ್ದ ಯರನಾಳ ಉಕ್ಕಲಿ ವಿರಕ್ತಮಠದ ಪರಮಪೂಜ್ಯ ಗುರು ಸಂಗನಬಸವ ಮಹಾಸ್ವಾಮಿಜಿ ಮಾತನಾಡಿ, ಬಸವಣ್ಣನವರ ತತ್ವಗಳು ಸರ್ವಕಾಲಕ್ಕೂ ಸತ್ಯವಾಗಿದ್ದು ಸರ್ವರೂ ಕಾಯಕನಿಷ್ಠರಾಗಿರಬೇಕು, ಮುಂಬರುವ ದಿನಗಳಲ್ಲಿ ಸಂಗನಬಸವ ಶಿವಯೋಗಿಗಳು ಹೆಸರು ಅಜರಾಮರವಾಗಿ ಉಳಿಯುವಂತ ಕಾರ್ಯಗಳು ಜರುಗಲಿವೆ ಎಂದರು.
ಪ್ರೋ ಸಿದ್ದಣ್ಣ ಉತ್ನಾಳ ಮಾತನಾಡಿ ಬಂಥನಾಳ ಸಂಗನಬಸವ ಪೂಜ್ಯರು ಶಿಕ್ಷಣ ಸಂಸ್ಥೆ ತೆರೆಯದಿದ್ದರೆ ಜಿಲ್ಲೆಯ ಬಹುತೇಕ ಜನ ಅನಕ್ಷರಸ್ಥರಾಗಿ ಉಳಿಯುತ್ತಿದ್ದರು, ಈ ಜಿಲ್ಲೆ ಯಲ್ಲಿ ಶಿಕ್ಷಕರಾಗಲು ಪೂಜ್ಯರು ತೆರೆದ ಶಿಕ್ಷಕರ ಶಿಕ್ಷಣ ಸಂಸ್ಥೆಯೇ ಕಾರಣ ಎಂದರು.
ಜಾನಪದ ಸಾಹಿತಿ ಸಕ್ರೆಪ್ಪ ಪಾಗದ ಮಾತನಾಡಿ ನಮ್ಮ ಪೂರ್ವಜರ ಸಂಸ್ಕೃತಿ, ಸಂಪ್ರ ದಾಯ ಅನುಸರಿಸಿ ಉಳಿಸಿ ಬೆಳೆಸೋಣ ಎಂದರು. ಮಸೂತಿ ಅಕ್ಕನ ಬಳಗ ಹಾಗೂ ಗ್ರಾಮದ ಹಿರಿಯರು ಸೇರಿ ಯರನಾಳ ಮಠದ ಗುರು ಸಂಗನಬಸವ ಮಹಾ ಸ್ವಾಮಿಜಿ ಯವರ ತುಲಾಭಾರ ಸೇವೆ ಮಾಡಿದರು.
ಮಸೂತಿ ಉದಯೋನ್ಮುಕ ಕವಯಿತ್ರಿ ಭಾರತಿ ಸಂತೋಷ ಚನಗೊಂಡರವರ “ಅಭಿನವ ಅಲ್ಲಮ” ಕೃತಿ ಲೋಕಾರ್ಪಣೆ ಗೊಳಿಸಲಾಯಿತು. ಕರುನಾಡು ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗದೀಶ ಸಾಲಳ್ಳಿ, ಸುವರ್ಣ ವಾಹಿನಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಕೆಲೂರರವರಿಗೆ ಸನ್ಮಾನಿಸಲಾಯಿತು,ಕ್ರಿಡೆಯಲ್ಲಿ ಸಾಧನೆ ಮಾಡಿದ ಕ್ರಿಡಾಪಟುಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶಂಕರಗೌಡ ಪಾಟೀಲ,ಡಾ,ಅಮರೇಶ ಮಿಣಜಗಿ, ಬಸವರಾಜ ಜಾಲಗೇರಿ,ಸಿ ಪಿ ಪಾಟೀಲ,ಕೆ ವಿ ಕುಲಕರ್ಣಿ, ಸಂತೋಷ ಗಣಾಚಾರಿ,ಎಸ್ ಎಸ್ ಗರಸಂಗಿ,ಬಿ ಎ ಪಾಟೀಲ,ಬಿ ಎಲ್ ದೇವಕಾರ,ಲೇಖಕಿ ಭಾರತಿ ಚನಗೊಂಡ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ನಂತರ ಜಿ ಟಿ ವಿ ಕಲಾವಿದೆ ಮಹನ್ಯಾ ಪಾಟೀಲ ಹಾಗೂ ಸಿದ್ಧಾರ್ಥ ಬೈಚಬಾಳ ತಂಡದಿಂದ ಸಂಗೀತ ಸಂಜೆ ಜರುಗಿತು.