ಕೃತಿ ಲೋಕಾರ್ಪಣೆ, ಶ್ರೀಗಳ ತುಲಾಭಾರ ಕಾರ್ಯಕ್ರಮ
ಕೊಲ್ಹಾರ:ಸುಕ್ಷೇತ್ರ ಮಸೂತಿ ಮೂಲ ಸಂಗನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ೧೫-೧೨-೨೦೨೨ ರಂದುಸಾಯಂಕಾಲ ೭ ಗಂಟೆಗೆ ಭಾರತಿ ಚನಗೊಂಡರವರ ಅಭಿನವ ಅಲ್ಲಮ ಕೃತಿ ಲೋಕಾ ರ್ಪಣೆ ಸನ್ಮಾನ ಸಮಾರಂಭ ಹಾಗೂ ಮಸೂತಿ ಅಕ್ಕನ ಬಳಗದವರಿಂದ ಮ ನಿ ಪ್ರ ಗುರು ಸಂಗನಬಸವ ಮಹಾಸ್ವಾಮಿಜಿಯವರ ತುಲಾಭಾರ ಕಾರ್ಯಕ್ರಮ ಹಾಗೂ “ಬಂಥನಾಳ ಶಿವಯೋಗಿಗಳ ಶಿಕ್ಷಣ ಕ್ರಾಂತಿ” ಉಪನ್ಯಾಸ ಜರುಗಲಿದ್ದು ಶಿರೂರ ಮಠದ ಮ ನಿ ಪ್ರ ಡಾ.ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಯರನಾಳ ಉಕ್ಕಲಿ ವಿರಕ್ತಮಠದ ಗುರು ಸಂಗನಬಸವ ಮಹಾಸ್ವಾಮಿಜೀ ಅಧ್ಯಕ್ಷತೆ ಯಲ್ಲಿ, ಮಾಜಿ ಸಚಿವರು ಹಾಲಿ ಶಾಸಕ ಶಿವಾನಂದ ಪಾಟೀಲ ಜ್ಯೋತಿ ಬೆಳಗಿಸಲಿದ್ದು, ಜಾನಪದ ಸಾಹಿತ್ಯ ಕುರಿತು ಸಕ್ರೆಪ್ಪ ಪಾಗದ, ಬಂಥನಾಳ ಶಿವಯೋಗಿಗಳ ಶಿಕ್ಷಣ ಕ್ರಾಂತಿ ಕುರಿತು ಪ್ರೋ ಸಿದ್ದಣ್ಣ ಉತ್ನಾಳ ಉಪನ್ಯಾಸ ನೀಡಲಿದ್ದಾರೆ.
ಕರುನಾಡು ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗದೀಶ ಸಾಲಳ್ಳಿ, ಸುವರ್ಣ ವಾಹಿನಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಕೆರೂರರವರಿಗೆ ಸನ್ಮಾನಗೈಯಲಿದ್ದು ಅತಿಥಿಗಳಾಗಿ ಶಂಕರಗೌಡ ಪಾಟೀಲ,ಡಾ,ಅಮರೇಶ ಮಿಣಜಗಿ, ಬಸವರಾಜ ಜಾಲಗೇರಿ, ಸುರೇಶ್ ವಠಾರ,ಸಿ ಪಿ ಪಾಟೀಲ,ಎಸ್ ಎಸ್ ಗರಸಂಗಿ,ಬಿ ಎ ಪಾಟೀಲ,ಬಿ ಎಲ್ ದೇವಕಾರ,ಲೇಖಕಿ ಭಾರತಿ ಚನಗೊಂಡ ಉಪಸ್ಥಿತ ರಿರುವರು.
ಜಿ ಟಿ ವಿ ಕಲಾವಿದೆ ಮಹನ್ಯಾ ಪಾಟೀಲ ಹಾಗೂ ಸಂಗಡಿಗರು, ರಾತ್ರಿ ೧೦ ಗಂಟೆಗೆ ಸಿದ್ಧಾರ್ಥ್ ಬೈಚಬಾಳ್ ತಂಡದಿಂದ ಸಂಗೀತ ಸಂಜೆ ಜರುಗಲಿದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.