ನಾಗೂರ ರಸ್ತೆ ದುರಸ್ತಿಗೆ ಟಿಪ್ಪು ಕ್ರಾಂತಿ ಸೇನೆ ಆಗ್ರಹ
ಬಸವನಬಾಗೇವಾಡಿ:ಪಟ್ಟಣದ ನಾಗೂರ ರಸ್ತೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಟಿಪ್ಪು ಕ್ರಾಂತಿ ಸೇನೆ ಕಾರ್ಯಕರ್ತರು ಪುರಸಭೆ ಅಧಕಾರಿ ಬಿ, ಕಲಾದಗಿ ಅವರಿಗೆ ಮನವಿ ಸಲ್ಲಿಸಿ ದರು.
ಈ ಸಂಧರ್ಭದಲ್ಲಿ ಟಿಪ್ಪು ಕ್ರಾಂತಿ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ಖಾಜಂಬರ ನದಾಫ ಮಾತನಾಡಿ ಪಟ್ಟಣದ ನಾಗೂರ ರಸ್ತೆ ಸಂಪೂರ್ಣ ಹದಿಗೆಟ್ಟಿದೆ, ಈ ಮಾರ್ಗದಲ್ಲಿ ಪ್ರತಿ ನಿತ್ಯ ವಿದ್ಯಾರ್ಥಿಗಳು, ವೃದ್ದರು, ಹಾಗೂ ಶಾಲಾ ವಾಹನಗಳು ಸೇರಿದಂತೆ ಸಾಕಷ್ಟು ವಾಹನ ಗಳು ಸಂಚರಿಸುತ್ತವೆ ರಸ್ತೆಯಲ್ಲಿ ಎಲ್ಲಂದರಲ್ಲಿ ತಗ್ಗು ಬಿದ್ದು ರಸ್ತೆಯಲ್ಲಿ ತಗ್ಗು ಎಂದರೆ ತಪ್ಪಾಗುತ್ತದೆ ತಗ್ಗಿನಲ್ಲಿ ರಸ್ತೆ ಎಂಭ0ತಾಗಿದೆ,
ಈ ರಸ್ತೆಯಲ್ಲಿ ಈಗಾಗಲೇ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಸಾಕಷ್ಟು ಇವೆ ಭೀಕರ ಅಪಘಾತಗಳು ಸಂಭವಿಸುವ ಮುಂಚಿತವಾಗಿಯೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕು ಇಲ್ಲವಾದರೆ ಟಿಪ್ಪು ಕ್ರಾಂತಿ ಸೇನೆ ನೇತೃತ್ವದಲ್ಲಿ ಸ್ಥಳೀಯರಿಂದ ಪುರಸಬೆಗೆ ಮುತ್ತಿಗೆ ಹಾಕಿ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗು ವದು ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ನಾಸೀರ ತಾಂಬೋಳಿ, ಸಲೀಮ್ ಲಾಟಿ, ವೀರಭದ್ರಪ್ಪ ಹಡಪದ, ಯಮನಪ್ಪಾ ಭಜಂತ್ರಿ, ಅಬ್ದುಲ್‌ರಜಾಕ ಮನಗೂಳಿ, ಜಾಕೀರ ನದಾಫ್, ಆನಂದ ಬಜಂತ್ರಿ, ರಾಜಹ್ಮದ ನದಾಫ್, ಹಣಮಂತ ಬಜಂತ್ರಿ, ಸೇರಿದಂತೆ ಮುಂತಾದವರು ಇದ್ದರು.