ನೂತನ ಬಂಜಾರ ಸಮುದಾಯದ ಭವನ ಲೋಕಾರ್ಪಣೆ
ಇಂಡಿ:ಬಂಜಾರ ಸಮುದಾಯದ ಕುಲಬಾಂಧವರು ಸರ್ವ ಸಮಾಜದೊಂದಿಗೆ ಪ್ರೀತಿ ,ವಿಶ್ವಾಸ- ಸಾಮರಸ್ಯ ಜೀವನಸಾಗಿಸುವ ಮೂಲಕ ತಮ್ಮ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಎಂದು ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು.
ವಿಜಯಪೂರ ರಸ್ತೆಯಲ್ಲಿ ನೂತನ ಬಂಜಾರ ಸಮುದಾಯದ ಭವನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಬಂಜಾರ ಕುಲಬಾಂಧವರು ಸದಾ ಕಷ್ಟ ಜೀವಿಗಳು ಹಾಗೂ ಸಹಿಷ್ಣಿಗುಣ ಅವರಲ್ಲಿದೆ ತಾಳ್ಮೆ ಸಹಕಾರದಿಂದ ಇಂದು ಅನೇಕ ಉನ್ನತ ಮಟ್ಟದಲ್ಲಿದ್ದಾರೆ. ಕಳೆದ ನನ್ನ ರಾಜಕೀಯ ಜೀವನದ ೪೦ ವರ್ಷಗಳ ಸುಧೀರ್ಘ ಬಂಜಾರ ಸಮುದಾಯ ಸಾಕಷ್ಟು ನನಗೆ ಸಹಾಯ ಸಹಕಾರ ನೀಡಿದ್ದಾರೆ. ಹಿಂದೆ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವ ಸಂಪುಟ ಈ ಸಮುದಾಯದ ಸರ್ವಾಂಗೀಣ ಪ್ರಗತಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಸಹಾಯ ಮಾಡಿದವರಿಗೆ ಸ್ಮರಿಸುವುದು ಮನುಷ್ಯ ಧರ್ಮ.
ಬಂಜಾರ ಸಮಾಜ ಎಸ್ಸಿ ಸೇರ್ಪಡೆಗಾಗಿ ಕೆ.ಟಿ ರಾಠೋಡ ಹಾಗೂ ಎಲ್.ಎನ್ ನಾಯಿಕ ಮತ್ತು ಅಂದಿನ ಕಾಂಗ್ರೆಸ್ ಮುಖ್ಯ ಮಂತ್ರಿ ಡಿ.ದೇವರಾಜ ಅರಸ್ ಇವರು ಮಾಡಿದ ಕಾರ್ಯ ಪ್ರತಿ ಬಂಜಾರ ಸಮುದಾಯ ಸೂರ್ಯ, ಚಂದ್ರ ಇರುವವರೆಗೂ ಸ್ಮರಿಸಬೇಕು. ಎಸ್ಸಿ ಸೇರ್ಪಡೆ ಮಾಡಿರದಿದ್ದರೆ ನಿಮ್ಮ ಪರಸ್ಥಿತಿ ಅವಲೋಕನ ಮಾಡಿಕೊಳ್ಳಿ. ಇಂದು ಬಂಜಾರ ಸಮುದಾಯ ಸಾಕಷ್ಟು ಜನರು ಗುಳೆ ಹೋಗುತ್ತಿದ್ದಾರೆ ಇಂತಹ ಗುಳೆ ಹೋದ ಸಂದರ್ಬದಲ್ಲಿ ಇವರ ಮಕ್ಕಳಿಗೆ ಒಳ್ಳೇಯ ಶಿಕ್ಷಣ ನೀಡಬೇಕಾಗಿ ರುವುದು ಜನಪ್ರತಿನಿಧಿಗಳ ಕರ್ತವ್ಯ.ಮುಂಬರುವ ದಿನಗಳಲ್ಲಿ ನಮ್ಮ ಸರಕಾರ ಬಂದೆ ಬರುತ್ತದೆ ವಸತಿ ಶಾಲೆಗಳನ್ನು ಸ್ಥಾಪಿಸಿ ಬಂಜಾರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು.
ಪಟ್ಟಣದಲ್ಲಿ ವಾಹನ ಅಫಘಾತದಲ್ಲಿ ಸರ್ಕಲ್ ಹಾನಿಯಾಗಿತ್ತು ನಾನು ಒಬ್ಬ ಜನಪ್ರತಿನಿಧಿಯಾಗಿ ಎಲ್ಲ ಸಮುದಾಯವನ್ನು ಸಮಾನವಾಗಿ ಗೌರವಿಸು ವುದು ನನ್ನ ಕರ್ತವ್ಯೆ.ಸಂತ್ ಸೇವಾಲಾಲ್ ಕೇವಲ ಒಂದೇ ವರ್ಗದ ಸಂತರಲ್ಲ ಇಡೀ ಮಾನವ ಕುಲಕೋಟಿಗೆ ಉದ್ದಾರ ಮಾಡಿದ್ದಾರೆ. ಹಾನಿಯಾದ ಸೇವಾಲಾಲ್ ಮೋರ್ತಿಯನ್ನು ಎಷ್ಟು ಖುರ್ಚು ಬಂದರೂ ಪರವಾಗಿಲ್ಲ ಸದ್ಯ ೧೦ ಲಕ್ಷ ರೂ ನೀಡಿರುವೆ ಹೆಚ್ಚುವರಿ ಹಣ ನೀಡುವದರೊಂದಿಗೆ ಇಡೀ ಜಿಲ್ಲೆಯಲ್ಲಿ ಮಾದರಿಯಾಗುವಂತೆ ಸರ್ಕಲ್ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
*ನನ್ನ ಅವಧಿಯಲ್ಲಿ ಇಡೀ ಎಲ್ಲ ಸಮುದಾಯಕ್ಕೆ ಸ್ಥಳೀಯ ಆಡಳಿತದಲ್ಲಿ ಪುರಸಭೆ. ತಾಲೂಕಾ ಪಂಚಾಯತ ,ಜಿ.ಪಂಚಾಯತ, ಗ್ರಾ.ಪ0ಚಾಯತ ಸೇರಿದಂತೆ ಪ್ರತಿಯೋಂದು ಸಮುದಾಯಕ್ಕೆ ಅಧಿಕಾರ ಹಂಚಿಕೆ ಮಾಡಿ ಡಾ.ಬಿ.ಆರ್ ಅಂಬೇಡ್ಕರವರ ಸಂವಿಧಾನದ ಸಿದ್ದಾಂತದ0ತೆ ಸರ್ವರಿಗೂ ಸಮಬಾಳು ಸಮಪಾಲು ನ್ಯಾಯ ನೀಡಿರುವೆ.ಶಾಸಕ ಯಶವಂತರಾಯಗೌಡ ಪಾಟೀಲ.
ಬಾಕ್ಸ: ಕಂದಾಯ ಗ್ರಾಮಗಳು ಮಾಡಿರುವದು ಬಿಜೆಪಿಯವರು ಅಲ್ಲ ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ್ದಾರೆ . ಉಳ್ಳುವವನೇ ಭೂಮೀಯ ಒಡೇಯ ,ಕಂದಾಯ ಗ್ರಾಮಗಳು ಹಾಗೂ ಕಾಂಗ್ರೆಸ್ ಸರಕಾರದ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸಂತ್ ಸೇವಾಲಾಲ್ ಇವರ ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದಾರೆ ನಮ್ಮ ಬಂಜಾರ ಸಮುದಾಯಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ ಎಂದರು.ವಿಧಾನ ಪರಿಷತ್ತ ಮುಖ್ಯ ಸಚೇತಕ ಪ್ರಕಾಶ ರಾಠೋಡ.
ಬಂಜಾರ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಬೇಕು. ಬಂಜಾರ ಭವನ ತ್ಯೆಂತ ಸುಂದರ ಗುಣಮಟ್ಟದಾಗಿದೆ ಇದಕ್ಕೆಲ್ಲ ಶಾಸಕ ಯಶವಂತರಾಯಗೌಡ ಪಾಟೀಲರ ಇಚ್ಛಾ ಶಕ್ತಿ ಕರ್ನಾಟಕ ರಾಜ್ಯದಲ್ಲಿಯೇ ಬಂಜಾರ ಸಮುದಾಯಕ್ಕೆ ಅತೀ ಹೆಚ್ಚು ಅನುಧಾನ ,ಅಧಿಕಾರ ಹಾಗೂ ಕಾಳಜೀ ಮಾಡಿದ ಏಕೈಕ್ಯ ಶಾಸಕ ಯಶವಂತರಾಯಗೌಡ ಪಾಟೀಲ ಮಾತ್ರ ಎಂದು ಪೂಜ್ಯ ಸೋಮನಿಂಗ ಮಹಾರಾಜರು ಕೆಸರಟ್ಟಿ ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ಪ್ರಕಾಶ ಮಹಾರಾಜ ಸಾನಿಧ್ಯವಹಿಸಿದರು.
ಮಾಜಿ.ತಾ.ಪಂ ಅಧ್ಯಕ್ಷ ಶೇಖರ ನಾಯಿಕ, ವಿಶ್ವನಾಥ ಚವ್ಹಾಣ, ಶಂಕರ ಚವ್ಹಾಣ, ಮಲ್ಲು ನಾಯಿಕ, ಮಲ್ಲನಗೌಡ ಪಾಟೀಲ ಶ್ರೀಕಾಂತ ಕುಡಿಗನೂರ, ಜೆಟ್ಟೆಪ್ಪ ರವಳಿ, ಜಾವೀದ ಮೋಮಿನ, ಪ್ರಶಾಂತ ಕಾಳೆ, ಚಂದ್ರಶೇಖರ ರೂಗಿ, ಧರ್ಮರಾಜ ವಾಲೀಕಾರ, ಜೀತಪ್ಪ ಕಲ್ಯಾಣಿ, ಸತೀಶ ಕುಂಬಾರ, ಶ್ರೀಕಾಂತ ಚವ್ಹಾಣ, ನಿರ್ಮಲಾ ತಳಕೇರಿ, ಸುನೀಲ ಮದ್ದಿನ, ಯಮುನಾಜಿ ಸಾಳುಂಕೆ, ಅರ್ಜುನ ಲಮಾಣಿ, ಜೈರಾಮ ಚವ್ಹಾಣ, ರಮೇಶ ರಾಠೋಡ, ಪ್ರೋ,ವಿಜಯಕುಮಾರ ರಾಠೋಡ, ಪಿಂಟು ರಾಠೋಡ, ಗೋವಿಂದ ರಾಠೋಡ, ಧರ್ಮ ರಾಠೋಡ ಸೇರಿದಂತೆ ಅನೇಕ ಗಣ್ಯರು ಇದ್ದರು.