ಸರ್ವಧರ್ಮ ಸದ್ಭಾವನ ಸಮಾರಂಭ ಪೂರ್ವಭಾವಿ ಸಭೆ
ಕೊಲ್ಹಾರ:20 ನೇ ಶತಮಾನದ ಸೂಫಿ ಸಂತ ಗುರು ಹಲ್ ಹಾಜ್ ಶಾಹ ಮೊಹಮ್ಮದ್ ಅಬ್ದುಲ್ ಗಪ್ಫಾರ ಖಾದ್ರಿ ಅವರ 30ನೇ ವರುಷದ ಉರುಸಿನ ನಿಮಿತ್ತವಾಗಿ 23 ನೇ ವರ್ಷದ ಸರ್ವಧರ್ಮ ಸದ್ಭಾವನ ಸಮಾರಂಭ ಹಾಗೂ 18ನೇ ಅಲಹಾಬಾದ್ ಮೌಲಾನ ಭಾವೈಕ್ಯತೆ ಪ್ರಶಸ್ತಿ ಪ್ರಧಾನ ಸಮಾರಂಭ ಮಾರ್ಚ್ 12 ರ ರವಿವಾರದಂದು ಖಾನ್ ಕಾಯೇ ಗಪ್ಫಾರಿಯಾ ಗುರುಕುಲದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಯ್ಯುಬ್ ಖಾನ್ ಪಠಾಣ ಹೇಳಿದರು.
ಕೊಲ್ಹಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ವಧರ್ಮ ಸದ್ಭಾವನ ಕಾರ್ಯಕ್ರಮ ದಲ್ಲಿ ಪ್ರಸಕ್ತ ವರ್ಷದ ಸದ್ಭಾವನ ಪ್ರಶಸ್ತಿ ಯನ್ನು ಮಾಜಿ ಕೇಂದ್ರ ಸಚಿವ ರಹಮಾನ್ ಖಾನ್ ಅವರಿಗೆ ನೀಡಲಾಗು ವುದು ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಾನ್ ಕಾಯೇ ಗಪ್ಫಾರಿಯಾ ಗುರುಕುಲದ ಪೀಠಾಧಿಪತಿಗಳಾದ ಅಲ್ ಹಾಜ್ ಡಾ. ಬಕ್ತೀ ಯಾರ್ ಖಾನ್ ಪಠಾಣ, ಉಸ್ಮಾನ್ ಪಟೇಲ್ ಖಾನ್, ಹನೀಪ ಮಕಾನದಾರ, ಜಾವೀದ ಬಿಜಾಪುರ, ಅಬ್ಬು ಪಕಾಲಿ, ತೌಸೀಪ್ ಗಿರಗಾಂವಿ, ದಸ್ತಗೀರ ಕಲಾದಗಿ, ಇಕ್ಬಾಲ್ ನದಾಫ, ಶಫೀಕ ಹೊನವಾಡ ಇತರರು ಇದ್ದರು.