ದಲಿತರು ಕಾಂಗ್ರೆಸ್ಸಿಗೆ ಬೆಂಬಲ ನೀಡಬಾರದು: ನಾಗೇಶ ಶಿವಶರಣ
ಇಂಡಿ:೭೦ ವರ್ಷಗಳಿಂದ ದಲಿತ ಸಮುದಾಯದ ಮತ ಪಡೆದುಕೊಂಡು ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ದಲಿತರಿಗೆ ಯಾವುದೇ ಸ್ಥಾನಮಾನ ನೀಡಿರು ವುದಿಲ್ಲ. ಹೀಗಾಗಿ ಈ ಬಾರಿ ದಲಿತರು ಕಾಂಗ್ರೆಸ್ಸಿಗೆ ಬೆಂಬಲ ನೀಡಬಾ ರದು ಎಂದು ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ ಶಿವಶರಣ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಇಂಡಿ ವಿಧಾನಸಭಾ ಮತಕ್ಷೇತ್ರದಿಂದ ೩ ಬಾರಿ ೧೫ ವರ್ಷಗಳಿಂದ ಇಂಡಿ ತಾಲೂಕಿನ ಚಲವಾದಿ ಸಮುದಾಯ ದವರು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಆದರೆ ಇಂಡಿ ಮತಕ್ಷೇತ್ರದಲ್ಲಿ ಯಾವೊಬ್ಬ ಚಲವಾದಿ ವ್ಯಕ್ತಿಗೆ ರಾಜಕೀಯ ವಾಗಿ ಬೆಳೆಸಿರುವುದಿಲ್ಲ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ಹಾಗೂ ಸಹಕಾರಿ ಬ್ಯಾಂಕಿನಲ್ಲಿಯೂ ಯಾವೊಬ್ಬ ಚಲವಾದಿ ವ್ಯಕ್ತಿಗೆ ನಿರ್ದೇಶಕ ಮಾಡಿರುವುದಿಲ್ಲ ಎಂದು ಆರೋಪಿಸಿದ ಅವರು,ಇಂಡಿಯಲ್ಲಿಯೂ ಕಾಂಗ್ರೆಸ್ ಪಕ್ಷದ ಶಾಸಕರು ಚಲವಾದಿ ಸಮುದಾಯವನ್ನು ಕಡೆಗಣೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೇ ಚಲವಾದಿ ಸಮುದಾಯದ ಯಾವೊಬ್ಬ ನಾಯಕನಿಗೂ ಬ್ಲಾಕ್ ಕಾಂಗ್ರೆಸ್ ಹುದ್ದೆಯನ್ನು ನೀಡಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಆರೋಪಸಿದ ಅವರು, ಅಂಬೇಡ್ಕರ ನಿಗಮದಿಂದ ಬರುವ ಯೋಜನೆಗಳು ನಿಜವಾದ ಚಲವಾದಿ ಫಲಾನುಭವಿಗಳಿಗೆ ನೀಡಿರುವುದಲ್ಲ ಎಂದು ಆರೋಪಿಸಿದರು.
ಚಲವಾದಿ ಸಮುದಾಯದವರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷನ್ನು ಬೆಂಬಲಿಸದೆ, ಬಹುಜನ ಸಮುದಾಯದ ವ್ಯಕ್ತಿಯನ್ನು ಗೆಲ್ಲಿಸಬೇಕು ಎಂದು ನಾಗೇಶ ಶಿವಶರಣ, ಧರ್ಮರಾಜ ಕಾಲೇಬಾಗ, ವಿಕಾಶ ಹೊಸಮನಿ, ಅರವಿಂದ ವಠಾರ, ಸಂತೋಷ ಹಾದಿಮನಿ, ಸಾಗರ ಕಾಳೆ, ಕೇತನ ಕಾಲೇಬಾಗ, ಸಿದ್ದಾರ್ಥ ಮೂರಮನ, ಸಿದ್ದಾರ್ಥ ಹಳ್ಳದಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.