ಬಹಿರಂಗ ನಾಮಪತ್ರ ನಾಮಪತ್ರ ಸಲ್ಲಿಕೆ – ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ:ಭೀರಪ್ಪ ನಗರದ ಶ್ರೀಭೀರಲಿಂಗೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅಪಾರ ಕಾರ್ಯಕರ್ತರೊಂದಿಗೆ ಮತ್ತು ಮುಖಂಡ ರೊ0ದಿಗೆ ವಿಶೇಷ ಪೂಜೆ ಸಲ್ಲಿಸಿ ಬಹಿರಂಗ ನಾಮಪತ್ರ ಸಲ್ಲಿಸಿದರು.
ಇಂದು ಬೆಳಿಗ್ಗೆ ಮುಂಜಾನೆ ೧೦-೦೦ ಗಂಟೆಗೆ ಭೀರಪ್ಪನಗರದಲ್ಲಿ ಶ್ರೀಭೀರಲಿಂಗೇಶ್ವರನ ಸನ್ನಿಧಾನಕ್ಕೆ ಕಾರ್ಯಕರ್ತರು ಮತ್ತು ಮುಖಂಡರೊAದಿಗೆ ತೇರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕ ಉದ್ದೇಶಿಸಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಿ ನಂತರ ಶ್ರೀಭೀರಲಿಂಗೇಶ್ವರ ದೇವಸ್ಥಾನದಿಂದ ತೇರೆದ ವಾಹನದಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಶಾಸಕ ಯಶವಂತ ರಾಯಗೌಡ ಪಾಟೀಲ ಮುಖಂಡರುಗಳಾದ ಎಂ.ಆರ್ ಪಾಟೀಲ (ಬೊಳ್ಳೋಳ್ಳಿ) ಬಾಬುಸಾಹುಕಾರ ಮೇತ್ರಿ, ಮಲ್ಲಿಕಾರ್ಜುನ ಲೋಣಿ, ಜಟ್ಟೆಪ್ಪ ರವಳಿ, ಎಸ್.ಎಂ ಪಾಟೀಲ ಗಣಿಹಾರ, ಜಾವೀದ ಮೋಮಿನ್ , ಗಿರೀಶ ಚಾಂದಕವಟೆ, ಶಿವಾನಂದ ನಿಂಬಾಳ, ಚಂದ್ರಶೇಖರ ರೂಗಿ ಅಪಾರ ಜನಸ್ತೋಮ ಕಾರ್ಯಕರ್ತರಿಗೆ ಕೈ ಬಿಸುತ್ತಾ ರಸ್ತೆಯ ಯುದ್ದಕ್ಕೂ ಸಾಗಿದರು.
ಮೆರವಣಿಯಲ್ಲಿ ಕಂಸಾಳೆ, ಡೊಳ್ಳು ಕುಣಿತ, ಚಿಟ್ಟಲಿಗೆ ,ಬಾಜಾ ,ಬಂಜೇ0ತ್ರಿಗಳು, ಬೊಂಬ್ಬೆ ಕುಣಿತ,ನವಿಲು ಕುಣಿತ ಹೀಗೆ ವಿನೂತನ ವಾದ್ಯಗಳ ವೈಭೋಗಗಳ ಮಧ್ಯ ಪಟ್ಟಣದ ಮಿನಿವಿಧಾನಸೌಧಾವರೆಗೆ ತೆರಳಿ ಉಪಕಂದಾಯವಿಭಾಗಾಧಿಕಾರಿ ರಾಮಚಂದ್ರ ಗಡದೆ ಇವರಿಗೆ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಬಹಿರಂಗ ನಾಮಪತ್ರ ಸಲ್ಲಿಸಿದರು ಈ ಸಂಧರ್ಬದಲ್ಲಿ ಕಾಂಗ್ರೆಸ್ ಮುಖಂಡರಾದ
ಭೀಮಾಶಂಕರ ಮೂರಮನ್, ಶೇಖರ ನಾಯಕ,ಇಲಿಯಾಸ ಬೋರಾಮಣಿ, ಅಲಗೊಂಡ ಸೂಚಕರಾಗಿದ್ದರು.
ಬಿ.ಎಂ ಕೋರೆ, ಆನಂದಪ್ಪ ಹುಣಸಗಿ, ಮಹಾದೇವ ಗಡ್ಡದ, ಸತಾರ ಬಾಗವಾನ, ಶಹಾಜೀ ಮಿಸಾಳೆ, ಗೋಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಹಣಮಂತ ಖಂಡೆಕಾರ, ಅಂತೂ ಜೈನ್, ಭೀಮುಗೌಡ ಪಾಟೀಲ, ಶಾಂತುಗೌಡ ಬಿರಾದಾರ, ಭೀಮಣ್ಣಾ ಕೌಲಗಿ, ರಷೀದ ಅರಬ, ಅಣ್ಣಪ್ಪ ಬಿದರಕೋಟಿ, ಗುರುಣಗೌಡ ಪಾಟೀಲ, ರುಕ್ಮುದೀನ ತದ್ದೇವಾಡಿ, ಸಣ್ಣಪ್ಪ ತಳವಾರ, ವಿಶ್ವನಾಥ ಬಿರಾದಾರ,ತಮ್ಮಣ್ಣಾ ಪೂಜಾರಿ, ಮಂಜು ಕಾಮಗೊಂಡ, ಸುಭಾಷ ಬಾಬರ, ಪ್ರಶಾಂತ ಕಾಳೆ, ಧರ್ಮರಾಜ ವಾಲೀಕಾರ, ರಾಜಶೇಖರ ನಾಟೀಕಾರ,ರಾಜಶೇಖರ ಕುಲಕರ್ಣಿ, ಅಯುಬ ಬಾಗವಾನ, ಮಲ್ಲೇಶಿ ನಾವಿ, ಸೋಮು ಮ್ಯಾಕೇರಿ, ಹಪೀಜ ಮುಲ್ಲಾ,ಸತೀಶ ಕುಂಬಾರ, ಜೈನೂದಿನ ಬಾಗವಾನ , ನೀಲಕಂಠ ರೂಗಿ, ಪರಶುರಾಮ ಹತ್ತರಕಿ, ಸಂಜು ಚವ್ಹಾಣ, ನಿರ್ಮಲಾ ತಳಕೇರಿ, ಶಿವಾನಂದ ಬಡಿಗೇರ, ಮಲ್ಲು ಮಡ್ಡಿಮನಿ, ಶೈಲಜಾ ಜಾಧವ,ರಾಜು ಬಡೀಗೇರ, ಸೇರಿದಂತೆ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಇದ್ದರು.