ಈ ಭಾಗದ ನೀರಾವರಿಗೆ ಜೆಡಿಎಸ್ ಕೊಡುಗೆ ಅನೂನ್ಯ: ಬಿ.ಡಿ ಪಾಟೀಲ
ಇಂಡಿ:ಗೋರನಾಳ ಗ್ರಾಮದಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಬಿ.ಡಿ ಪಾಟೀಲ ,ಮಾಜಿ ಜಿ.ಪಂ ಅಧ್ಯಕ್ಷ ಶಿವಯೋಗೇಪ್ಪ ನೇದಲಗಿ, ಜಿ.ಪಂ ಸದಸ್ಯ ರಾಮು ರಾಠೋಡ ಮತಯಾಚನೆ ಮಾಡಿದರು.
ಈ ಸಂಧರ್ಬದಲ್ಲಿ ಬಿ.ಡಿ ಪಾಟೀಲ ಮಾತನಾಡಿ ಜೆಡಿಎಸ್ ಬಡವರ ದೀನದುರ್ಬಲರ ಪಕ್ಷ ಸೈದ್ದಾಂತಿಕ ನೆಲೆಗಟ್ಟಿನ ಮೇಲೆ ಸರ್ವಸಮುದಾಯವನ್ನು ಗೌರವಿಸುವ ಪಕ್ಷ , ಮಾಜಿ ಪ್ರಧಾನ ಮಂತ್ರಿ ದೆವೇಗೌಡರು ಬಡವರನ್ನು, ರೈತರನ್ನು ಸದಾ ಕಾಳಜೀ ಯಿಂದ ಕಾಣುತ್ತದೆ.
ಈ ಭಾಗದ ಸಂಪೂರ್ಣ ನೀರಾವರಿ ಮಾಡಲು ದೆವೇಗೌಡರ ಇಚ್ಛಾಶಕ್ತಿಯೇ ಕಾರಣ. ಈ ಬಾರಿ ಈ ಬಡ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ನಿಮ್ಮ ಮನೆಯ ಮಗನಾಗಿ ದುಡಿಯುತ್ತೇನೆ. ನನಗೆ ಬಡತನದ ಕಹಿ ಬಡವರ ನೋವು ಬಲ್ಲೆ ಈ ಭಾಗದಲ್ಲಿ ಅನೇಕ ಬಾರಿ ಬಡವರ ರೈತರ ಪರವಾಗಿ ಸದಾ ಹೋರಾಟ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿಯುವಕರಿಗೆ ಉದ್ಯೋಗ ನೀಡಿ ನಿರುದ್ಯೋಗ ನಿವಾರಣೆ , ಈ ಭಾಗದಲ್ಲಿ ಸಂಪೂರ್ಣ ನೀರಾವರಿ ಧೈಡಸಂಲ್ಪ ದೊ0ದಿಗೆ ನಿಮ್ಮ ಖುಣ ತೀರಿಸುತ್ತೇನೆ ಎಂದರು.
ಮಾಜಿ.ಜಿ.ಪಂ ಅಧ್ಯಕ್ಷ ಶಿವಯೋಗೇಪ್ಪ ನೇದಲಗಿ, ರಾಮು ರಾಠೋಡ, ನಾಗೇಶ ತಳಕೇರಿ, ವಿಜಯಕುಮಾರ ಬೋಸಲೆ, ಸದ್ದಾಂತ ಅರಬ, ಮುತ್ತಪ್ಪ ಪೋತೆ, ಅಯುಬ ನಾಟೀಕಾರ, ಶ್ರೀಶೈಲಗೌಡ ಪಾಟೀಲ, ಡಾ.ರಮೆಶಢ ರಾಠೋಡ, ಸಿದ್ದು ಕಲ್ಲೂರ, ಕಲ್ಲಯ್ಯಾ ಹಿರೇಪಟ್ಟ, ಸುರೇಶ ನಾಟೀಕಾರ, ಮನೋಹರ ನಾವಿ, ಚಂದು ಸಾಗನೂರ, ಸಿದ್ದು ಕಲ್ಲೂರ, ಗುರಪ್ಪ ತೆಗ್ಗೆಳ್ಳಿ, ಶರಣು ಗಂಗನ್ನಳ್ಳಿ, ಅಶೋಕ ಜಿಡ್ಡಿಮನಿ, ಚಿದಾನಂದ ಗೋರನಾಳ, ಸದು ಹೊಸಮನಿ ಬಸವರಾಜ ಹಂಜಗಿ ಸೇರಿದಂತೆ ಅನೇಕರಿದ್ದರು.