ಬಿಜೆಪಿ ಈ ಬಾರಿ ಕೂಡಾ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ
ಇಂಡಿ:ಕೇಂದ್ರ ಬಿಜೆಪಿ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನೇಕ ಜನಪರ ಯೋಜನೆಗಳು ಮಾಡಿರುವು ದರಿಂದ ಬಿಜೆಪಿ ಈ ಬಾರಿ ಕೂಡಾ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಹೇಳಿದರು.
ತಾಲೂಕಿನ ಚೌಡಿಹಾಳ ಗ್ರಾಮದಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ಭಾರತ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟçವಾಗಿದ್ದು. ನರೇಂದ್ರ ಮೋದಿಜೀಯವರು ಬಡವರ, ದೀನದುರ್ಬಲರ ಪರ ಅನೇಕ ಯೋಜನೆಗಳು ಅನುಷ್ಠಾನಕ್ಕೆ ತಂದಿದ್ದಾರೆ.
ಕರೋನಾ ಸಂಧರ್ಬದಲ್ಲಿ ದೇಶದ ಜನರನ್ನು ವ್ಯಾಕ್ಸಿನ ಹಾಕಿ ಕಂಡು ಹಿಡಿದು ಜನರ ಜೀವ ಉಳಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ಮನೆ ಮೂರು ಬಾಗಿಲು ಮುಖ್ಯ ಮಂತ್ರಿ ಸಲುವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಯಾವುದೇ ಕಾಲಕ್ಕೂ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರಷ್ಠೇ ಸತ್ಯ ಆದ್ದರಿಂದ ಬರುವ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದ ಗೆಲುವು ಬಿಜೆಪಿ ಪಕ್ಷಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂಧರ್ಬದಲ್ಲಿ ಬತ್ತುಸಾಹುಕಾರ ಹಾವಳಗಿ,ದಯಾಸಾಗರ ಪಾಟೀಲ, ಶಂಕರಗೌಡ ಪಾಟೀಲ, ಚೆನ್ನುಗೌಡ ಪಾಟೀಲ, ಸಂಜು ದಶವಂತ, ಮಲ್ಲಿಕಾರ್ಜುನ ಕೀವುಡೆ, ಸಿದ್ದಲಿಂಗ ಹಂಜಗಿ, ಅನೀಲಗೌಡ ಬಿರಾದಾರ, ಲಾಯಪ್ಪ ದೊಡಮನಿ, ಮಲ್ಲು ವಾಲೀಕಾರ, ಸಚೀನ ಬೊಳೆಗಾಂವ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪ್ರಚಾರ ಸಭೆಯಲ್ಲಿದ್ದರು.