ದೇಶ ತೊರೆಯದಂತೆ ರಾಜಪಕ್ಸೆಗೆ ನಿಷೇಧ
ನವದೆಹಲಿ :ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ, ಅವರ ಪುತ್ರ ನಮಾಲ್ ಮತ್ತು 15 ಮಿತ್ರರು ಸರ್ಕಾರಿ ವಿರೋಧಿ ಪ್ರತಿಭಟನಾ ಕಾರರ ವಿರುದ್ಧದ ಹಿಂಸಾಚಾರಕ್ಕೆ ಸಂಬಂಧಿಸಿ ದೇಶ ತೊರೆಯದಂತೆ ಶ್ರೀಲಂಕಾದ ನ್ಯಾಯಾಲಯ ಗುರುವಾರ ನಿಷೇಧ ಹೇರಿದೆ.
ಕೊಲಂಬೊದ ಮ್ಯಾಜಿಸ್ಟ್ರೇಟ್ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸೋಮವಾರ ನಡೆದ ಗುಂಪು ದಾಳಿಗಳ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದರು. ಇದು ಪ್ರತೀಕಾರದ ಹಿಂಸಾಚಾರಕ್ಕೆ ಕಾರಣವಾಯಿತು.
ಇದು ಒಂಬತ್ತು ಜನರನ್ನು ಬಲಿ ತೆಗೆದುಕೊಂಡಿದ್ದು, ವ್ಯಾಪಕ ವಿನಾಶಕ್ಕೆ ಕಾರಣವಾಯಿತು.