ಚರ್ಚ್ ಕಾರ್ಯಕ್ರಮದಲ್ಲಿ ಕಾಲ್ತುಳಿತ: 31 ಜನರು ಸಾವು, ಏಳು ಜನರಿಗೆ ಗಾಯ
ಲಾಗೋಸ್ :ಆಗ್ನೇಯ ನೈಜೀರಿಯಾದ ಪೋರ್ಟ್ ಹರ್ಕೋರ್ಟ್ ನಗರದ ಚರ್ಚ್ ಕಾರ್ಯಕ್ರಮ ದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ, ಕನಿಷ್ಠ 31 ಜನರು ಮೃತಪಟ್ಟು, ಏಳು ಜನರು ಗಾಯ ಗೊಂಡಿದ್ದಾರೆ.
ಶನಿವಾರ ಚರ್ಚ್ ನಲ್ಲಿ ಆಹಾರ ಸ್ವೀಕರಿಸಲು ಬಂದಿದ್ದ ನೂರಾರು ಜನರು ಗೇಟನ್ನು ಮುರಿದು ಕಾಲ್ತುಳಿತಕ್ಕೆ ಕಾರಣರಾದರು. ಮೃತರಲ್ಲಿ ಹೆಚ್ಚಿನವರು ಮಕ್ಕಳೇ ಆಗಿದ್ದರು.
ಸ್ಥಳೀಯ ಪೋಲೊ ಕ್ಲಬ್ನಲ್ಲಿ ಈ ಘಟನೆ ನಡೆದಿದ್ದು, ಹತ್ತಿರದ ಕಿಂಗ್ಸ್ ಅಸೆಂಬ್ಲಿ ಚರ್ಚ್ ಉಡುಗೊರೆ ದೇಣಿಗೆ ಅಭಿಯಾನ ಆಯೋಜಿಸಿತ್ತು ಎಂದು ನೈಜೀರಿಯಾದ ಸಿವಿಲ್ ಡಿಫೆನ್ಸ್ ಕಾರ್ಪ್ಸ್ನ ಪ್ರಾದೇಶಿಕ ವಕ್ತಾರ ಒಲುಫೆಮಿ ಅಯೋಡೆಲ್ ತಿಳಿಸಿದ್ದಾರೆ.
ಉಡುಗೊರೆ ವಸ್ತುಗಳನ್ನು ವಿತರಿಸುವ ಪ್ರಕ್ರಿಯೆಯಲ್ಲಿ, ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದರು.