ಎನ್‌ಡಿಬಿ ಪ್ರಾದೇಶಿಕ ಕಚೇರಿ ಪ್ರಧಾನ ನಿರ್ದೇಶಕರಾಗಿ ಡಾ.ಡಿ.ಜೆ.ಪಾಂಡ್ಯನ್ ನೇಮಕ
ಬೀಜಿಂಗ್‌:‘ಬ್ರಿಕ್ಸ್‌’ ರಾಷ್ಟ್ರಗಳು ಸ್ಥಾಪಿಸಿರುವ ‘ನ್ಯೂ ಡೆವಲೆಪ್‌ಮೆಂಟ್‌ ಬ್ಯಾಂಕ್‌’ನ ಭಾರತ ಪ್ರಾದೇಶಿಕ ಕಚೇರಿಯ ಪ್ರಧಾನ ನಿರ್ದೇಶಕರಾಗಿ ಡಾ.ಡಿ.ಜೆ.ಪಾಂಡ್ಯನ್ ಅವರನ್ನು ನೇಮಕ ಮಾಡಲಾಗಿದೆ.
ಪಾಂಡ್ಯನ್ ಅವರು ಬೀಜಿಂಗ್‌ನಲ್ಲಿರುವ ಏಷ್ಯಾ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ನ ಉಪಾಧ್ಯಕ್ಷ ಹಾಗೂ ಮುಖ್ಯ ಹೂಡಿಕೆ ಅಧಿಕಾರಿಯಾಗಿದ್ದರು. ನಿವೃತ್ತ ಐಎಎಸ್‌ ಅಧಿಕಾರಿಯಾಗಿರುವ ಅವರು, ಇದಕ್ಕೂ ಮುನ್ನ ಗುಜರಾತ್‌ನ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಎನ್‌ಡಿಬಿಯ ಪ್ರಾದೇಶಿಕ ಕಚೇರಿಯು ಅಹಮದಾಬಾದ್‌ನಲ್ಲಿರುವ ಗುಜರಾತ್‌ ಇಂಟರ್‌ನ್ಯಾಷನಲ್ ಫೈನಾನ್ಸ್‌ ಟೆಕ್‌-ಸಿಟಿಯಲ್ಲಿ ಇದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ, ‘ಬ್ರಿಕ್ಸ್‌’ನ ಸದಸ್ಯ ರಾಷ್ಟ್ರಗಳಾಗಿವೆ.