ಕುಟುಂಬಕ್ಕಾಗಿ ಉಪ-ಪ್ರಧಾನಿ ಹುದ್ದೆ ತೊರೆದ ಸೋಫಿ.!
ಬೆಲ್ಜಿಯಂ:ಪತಿ, ಮಕ್ಕಳು, ಕುಟುಂಬಕ್ಕಾಗಿ ಬೆಲ್ಜಿಯಂನ ವಿದೇಶಾಂಗ ಸಚಿವೆ ಹಾಗೂ ಉಪ ಪ್ರಧಾನಿ ಸೋಫಿ ವಿಲ್​ಮ್ಸ್​ ತಮ್ಮ ಹುದ್ದೆಯನ್ನೇ ತ್ಯಜಿಸಿದ್ದಾರೆ. ಪತಿಗಾಗಿ ತಮ್ಮ ಉಪ-ಪ್ರಧಾನಿ ಹುದ್ದೆಯನ್ನೇ ತೊರೆದಿದ್ದಾರೆ ಸೋಫಿ.
ಸೋಫಿ ಅವರ ಪತಿ ಆಸ್ಟ್ರೇಲಿಯಾದ ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್ ಮೆದುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಉಪ ಪ್ರಧಾನಿ ಸ್ಥಾನ ದಲ್ಲಿ ಇದ್ದುಕೊಂಡು, ಗಂಡ-ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯ ವಾಗುತ್ತಿಲ್ಲ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡುವುದಾಗಿ ಸೋಫಿ ಘೋಷಿಸಿ ದ್ದಾರೆ.
ಸೋಫಿ, 2020ರಿಂದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ,  2019ರಿಂದ 2020ರವರೆಗೆ ಬೆಲ್ಜಿಯಂನ ಪ್ರಧಾನ ಮಂತ್ರಿ ಯಾಗಿದ್ದರು. ಸುಧಾರಣಾವಾದಿ ಚಳವಳಿಯ ಸದಸ್ಯೆಯಾದ ಅವರು ಎರಡೂ ಪ್ರಮುಖ ಸ್ಥಾನಗಳನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.
2015ರಿಂದ 2019ರವರೆಗೆ ಚಾರ್ಲ್ಸ್ ಮೈಕೆಲ್ ಅವರ ಮೊದಲ ಮತ್ತು ಎರಡನೆಯ ಸರ್ಕಾರಗಳಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿ ದರು. ಕೋವಿಡ್​-19 ಸಮಯದಲ್ಲಿ ಕರೊನಾ ನಿಭಾಯಿಸುವ ಮೂಲಕ ಎಲ್ಲೆಡೆ ಖ್ಯಾತಿ ಗಳಿಸಿದರು.
