 : ಪತ್ನಿ ಬೀಚ್‌ನಲ್ಲಿ ಬಿಕಿನಿ ಧರಿಸಿ ಓಡಾಡಲೆಂದು 418 ಕೋಟಿ ರೂ. ಕೊಟ್ಟು ಇಡೀ ದ್ವೀಪವನ್ನೇ ಖರೀದಿಸಿದ ಪತಿ!
ದುಬೈ:ಸಾಮಾನ್ಯ ಜನರು ಒಂದು ಹೊತ್ತು ಊಟಕ್ಕೂ ಕಷ್ಟಪಡುತ್ತಿರುತ್ತಾರೆ. ದಿನದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಹಣವಿಲ್ಲದೇ ಬಿಸಿಲು, ಮಳೆಯಲ್ಲಿ ದುಡಿದು ಹಣ ಸಂಪಾದಿಸುತ್ತಿರುತ್ತಾರೆ.ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಬಿಕಿನಿ ಧರಿಸಿ ಬೀಚ್‌ನಲ್ಲಿ ಸುರಕ್ಷಿತವಾಗಿ ಓಡಾಡಲಿ ಎಂದು ಮಿಲಿಯನ್‌ ಡಾಲರ್‌ಗಳಷ್ಟು ಹಣ ನೀಡಿ ಒಂದು ದ್ವೀಪವನ್ನೇ ಖರೀದಿಸಿದ್ದಾನೆ. ದುಬೈ ಮೂಲದ ಗೃಹಿಣಿಯೊಬ್ಬಳು ತನ್ನ ಮಿಲಿಯನೇರ್ ಪತಿ ಬೀಚ್‌ನಲ್ಲಿ ತಾನು ಸುರಕ್ಷಿತವಾಗಿರಲು ಖಾಸಗಿ ದ್ವೀಪವನ್ನು ಖರೀದಿಸಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಈ ವಿಚಾರ ಇತ್ತೀಚೆಗೆ  ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌( ) ಆಗಿದೆ.
26 ವರ್ಷದ ಸೌದಿ ಅಲ್ ನಡಕ್ ಎಂಬಾಕೆ ಈ ಬಗ್ಗೆ ತನ್ನ ಇನ್ಸ್ಟಾಗ್ರಾಂ ಪೇಜ್‌ನಲ್ಲಿ  ವಿಡಿಯೊವನ್ನು ಹಂಚಿಕೊಂಡಿದ್ದಾಳೆ.  ನಾನು ಬಿಕಿನಿ ಧರಿಸಲು ಬಯಸಿದ್ದೆ. ಆದ್ದರಿಂದ ನನ್ನ ಮಿಲಿಯನೇರ್ ಪತಿ ನನಗಾಗಿ ದ್ವೀಪವನ್ನು ಖರೀದಿಸಿದ್ದಾನೆ. ಹಾಗಾಗಿ ನಾನೊಬ್ಬಳು ಅದೃಷ್ಟವಂತ ಪತ್ನಿ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.
    ✨ (@)
ಬ್ರಿಟಿಷ್ ಮೂಲದ 26 ವರ್ಷದ ಸೌದಿ, ದುಬೈ ಉದ್ಯಮಿ ಜಮಾಲ್ ಅಲ್ ನಡಕ್ ಇಬ್ಬರೂ ದುಬೈನಲ್ಲಿ ಓದುತ್ತಿದ್ದಾಗ ಭೇಟಿಯಾಗಿದ್ದಾರೆ. ನಂತರ ಅವರು ಒಬ್ಬರನೊಬ್ಬರು ಇಷ್ಟಪಡಲು ಶುರು ಮಾಡಿದ್ದಾರೆ. ಈಗ ಅವರಿಗೆ ಮದುವೆಯಾಗಿ ಮೂರು ವರ್ಷಗಳಾಗಿವೆ. ಈಕೆ ಈಗ ಶ್ರೀಮಂತ ಗೃಹಿಣಿಯಾಗಿರುವುದಲ್ಲದೆ, ಪ್ರಭಾವಶಾಲಿ ಆಗಿಯೂ ಹೆಸರುವಾಸಿಯಾಗಿದ್ದಾಳೆ.  ಅವಳ ಇನ್ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್ ಖಾತೆಗಳು ಇವರಿಬ್ಬರ ಐಷಾರಾಮಿ ಜೀವನಶೈಲಿಯನ್ನು ತೋರಿಸುತ್ತವೆ. ಉದಾಹರಣೆಗೆ, ಒಂದು ವಿಡಿಯೊದಲ್ಲಿ, ದಂಪತಿ ಡೈಮಂಡ್ ಸಾಲಿಟೇರ್ ಉಂಗುರವನ್ನು $ 1 ಮಿಲಿಯನ್ ಗೆ ಖರೀದಿಸಿದ್ದಾರೆ ಮತ್ತು ಮತ್ತೊಂದು $ 2 ಮಿಲಿಯನ್ ಅನ್ನು ಕಲಾಕೃತಿಗಳಿಗಾಗಿ ಹೂಡಿಕೆ ಮಾಡಿದ್ದಾರೆ. ಇದೆಲ್ಲವನ್ನು ಅವರು ಕೇವಲ ಒಂದು ದಿನದಲ್ಲಿ ಮಾಡಿದ್ದಾರೆ.
ಇದೀಗ ಸೌದಿ, ” ನನ್ನ ಪತಿ ನಾನು ಬೀಚ್‌ನಲ್ಲಿ ಸುರಕ್ಷಿತವಾಗಿರಬೇಕೆಂದು ಬಯಸುತ್ತಾರೆ, ಅದಕ್ಕಾಗಿಯೇ ಅವರು ಅದನ್ನು ಖರೀದಿಸಿದ್ದಾರೆ” ಎಂದು ಹೇಳುವ ವಿಡಿಯೊ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಇದಕ್ಕೆ ಒಂದು ವಾರದೊಳಗೆ 2.4 ಮಿಲಿಯನ್ ವೀವ್ಸ್‌ ಸಿಕ್ಕಿದೆ.
ಇದನ್ನೂ ಓದಿ:ತನ್ನ ಹಿಂದೂ ಗೆಳತಿಯನ್ನು ಕೊಲ್ಲುವೆ ಎಂದ ಪುಟ್ಟ ಮುಸ್ಲಿಂ ಬಾಲಕಿ! ಆತಂಕಕಾರಿ ವಿಡಿಯೊ!
ಗೌಪ್ಯತೆ ಮತ್ತು ಸುರಕ್ಷತಾ ಕಾರಣಗಳಿಗಾಗಿ ದ್ವೀಪದ ನಿಖರವಾದ ಸ್ಥಳವನ್ನು ಸೌದಿ ಬಹಿರಂಗಪಡಿಸಿಲ್ಲ. ಆದರೆ ಅವಳ ಪತಿ ಜಮಾಲ್ ಈ ವಿಚಾರಕ್ಕಾಗಿ 50 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾನೆ ಎಂದು ಹೇಳಿದ್ದಾಳೆ. “ಗೌಪ್ಯತೆ ಕಾರಣಗಳಿಗಾಗಿ ನಾವು ನಿಖರವಾದ ಸ್ಥಳವನ್ನು ಹಂಚಿಕೊಳ್ಳುತ್ತಿಲ್ಲ ಆದರೆ ಅದು ಏಷ್ಯಾದಲ್ಲಿದೆ ಮತ್ತು ಅದರ ಬೆಲೆ  50 ಮಿಲಿಯನ್ ಡಾಲರ್ ಆಗಿತ್ತು” ಎಂದು ತಿಳಿಸಿದ್ದಾಳೆ.