ರಿಷಿ ಸುನಕ್ ಐದನೇ ಸುತ್ತಿನಲ್ಲಿ ಅಗ್ರಸ್ಥಾನಿ
ಲಂಡನ್‌:ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಐದನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದು, 137 ಮತಗಳನ್ನು ಪಡೆದಿದ್ದಾರೆ.
ಐದನೇ ಸುತ್ತಿನ ಮತದಾನದಲ್ಲಿ 105 ಮತಗಳನ್ನ ಪಡೆದ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ ರೇಸ್‌ನಿಂದ ಹೊರಗುಳಿದಿದ್ದಾರೆ. ಸುನಕ್, ಲಿಜ್ ಟ್ರಸ್ ಅವರನ್ನ ಎದುರಿಸಲಿದ್ದು, ಅವರು 113 ಮತಗಳನ್ನ ಪಡೆದಿದ್ದಾರೆ.