ಥೈಲ್ಯಾಂಡ್’ನ ನೈಟ್‌ಕ್ಲಬ್‌ನಲ್ಲಿ ಅಗ್ನಿದುರಂತ: 13 ಮಂದಿ ಸಾವು
ಬ್ಯಾಂಕಾಕ್:ಶುಕ್ರವಾರ ಥೈಲ್ಯಾಂಡ್ನ ನೈಟ್‌ಕ್ಲಬ್‌ನಲ್ಲಿ ಸಂಭವಿ ಸಿದ ಅಗ್ನಿದುರಂತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಇತರ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸತ್ತಾಹಿಪ್ ಜಿಲ್ಲೆಯ ಚೊನ್ಬುರಿ ಪ್ರಾಂತದ ಮೌಂಟೇನ್ ಬಿ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕ್ಲಬ್ ನ ಗೋಡೆಗೆ ಅಂಟಿಸಿದ್ದ ರಟ್ಟಿಗೆ ಬೆಂಕಿಯ ಕಿಡಿ ಹಾರಿದ್ದು ತಕ್ಷಣ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. 3 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಕ್ಲಬ್ನ ಪ್ರವೇಶ ದ್ವಾರದಲ್ಲಿ 4 ಮಹಿಳೆಯರು ಮತ್ತು 9 ಪುರುಷರ ಮೃತದೇಹ ಪತ್ತೆಯಾಗಿದೆ.
ಹಲವರ ದೇಹದಲ್ಲಿ ಸುಟ್ಟ ಗಾಯಗಳಿವೆ. ಮೃತಪಟ್ಟವರು ಸ್ಥಳೀಯರು ಎಂದು ಪ್ರಾಥಮಿಕ ವರದಿ ತಿಳಿಸಿದೆ. ವಿದೇಶೀಯರು ಮೃತಪಟ್ಟಿರುವ ಸಾಧ್ಯತೆ ಇಲ್ಲ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.