ಆಲ್ ಶಬಾಬ್ ಉಗ್ರರಿಂದ ಸೊಮಾಲಿಯಾ ಹೋಟೆಲಿನಲ್ಲಿ ಗುಂಡಿನ ಸುರಿಮಳೆ
ಮೊಗಾದಿಶು:ಸೊಮಾಲಿಯಾ ರಾಜಧಾನಿ ಮೊಗಾದಿಶುನಲ್ಲಿ ಆಲ್ ಖೈದಾ ಜೊತೆ ನಂಟಿರುವ ಆಲ್ ಶಬಾಬ್ ಉಗ್ರರು ಸೊಮಾಲಿಯಾ ಹೋಟೆಲ್ ಗೆ ದಾಳಿ ನಡೆಸಿ ಗುಂಡಿನ ಸುರಿಮಳೆಯನ್ನೇ ಸುರಿಸಿದ್ದಾರೆ.
ಮುಂಬೈನ ತಾಜ್ ಹೋಟೆಲ್​ನಲ್ಲಿ ಉಗ್ರರು ಯಾವ ರೀತಿಯ ಹೋಟೆಲನ್ನು ವಶಕ್ಕೆ ಪಡೆದು, ಹತ್ಯಾಕಾಂಡ ನಡೆಸಿದ್ದರೋ ಅದೇ ರೀತಿಯಲ್ಲಿ ಸೊಮಾಲಿ ಯಾದ ಹಯಾತ್ ಹೋಟೆಲ್​ ಮೇಲೆ ದಾಳಿ ನಡೆದಿದೆ.
ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಶುಕ್ರವಾರ ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಂದೂಕುಧಾರಿಗಳು ಹೋಟೆಲ್‌ಗೆ ಬಲವಂತವಾಗಿ ನುಗ್ಗುವ ಕೆಲವೇ ನಿಮಿಷಗಳ ಮೊದಲು ಭಾರೀ ಸ್ಫೋಟ ಕೂಡ ಸಂಭವಿಸಿತ್ತು ಎನ್ನಲಾಗಿದೆ.