ಬಾಸ್ ಕಚೇರಿಯಲ್ಲಿ ಮಲಗಿರುವ ಫೋಟೋ ಹಂಚಿಕೊಂಡ ಟ್ವಿಟರ್ ಉದ್ಯೋಗಿ
ನ್ಯೂಯಾರ್ಕ್‌:ಟ್ವಿಟರ್ ಉದ್ಯೋಗಿಯೊಬ್ಬರು ತಮ್ಮ ಬಾಸ್ ಕಚೇರಿಯಲ್ಲಿ ನೆಲದ ಮೇಲೆ ಮಲಗಿರುವ ಫೋಟೋವನ್ನು ಹಂಚಿ ಕೊಂಡಿದ್ದಾರೆ. ಮಸ್ಕ್‌ ನೀಡಿದ ಕೆಲಸ ಪೂರೈಸಲು ಟ್ವಿಟರ್ ಮ್ಯಾನೇಜರ್‌ಗಳು ಕೆಲವು ಸಿಬ್ಬಂದಿಗೆ ವಾರದಲ್ಲಿ ಏಳು ದಿನಗಳು 12-ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಲು ಹೇಳಿದ್ದಾರೆ.
ಟ್ವಿಟರ್ ಸ್ಪೇಸ್‌ಗಳ ಉತ್ಪನ್ನ ನಿರ್ವಾಹಕ ಇವಾನ್ ಜೋನ್ಸ್ ಅವರು ತಮ್ಮ ಬಾಸ್ ಕಚೇರಿಯ ನೆಲದ ಮೇಲೆ ಗಾಢ ನಿದ್ದೆಯಲ್ಲಿ ರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಅಧಿಕಾವಧಿ ವೇತನ, ಪರಿಹಾರದ ಸಮಯ ಅಥವಾ ಉದ್ಯೋಗ ಭದ್ರತೆಯ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಈ ಸೂಚನೆಗಳನ್ನು ನೀಡಲಾಗಿದೆ ಎಂದು ವರದಿ ಹೇಳಿದೆ.