ವಿಕ್ಟೋರಿಯಾ ಸರೋವರಕ್ಕೆ ಉರುಳಿದ ದೇಶೀಯ ವಿಮಾನ
ತಾಂಜೇನಿಯಾ:ವಾಯುವ್ಯ ನಗರ ಬುಕೋಬಾದಲ್ಲಿ ಇಳಿಯುವ ಸ್ವಲ್ಪ ಸಮಯದ ಮೊದಲು ದೇಶೀಯ ಪ್ರಯಾಣಿಕ ವಿಮಾನ ಭಾನುವಾರ ತಾಂಜೇನಿ ಯಾದ ವಿಕ್ಟೋರಿಯಾ ಸರೋವರಕ್ಕೆ ಉರುಳಿದೆ.
‘ಪ್ರೆಸಿಷನ್ ಏರ್ ವಿಮಾನವು ಅಪಘಾತಕ್ಕೀಡಾಗಿದ್ದು, ವಿಮಾನ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿ ನೀರಿಗೆ ಅಪ್ಪಳಿಸಿದೆ’ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ವಿಲಿಯಂ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.  ದಾರ್ ಎಸ್ ಸಲಾಂನಿಂದ ಸರೋವರದ ಬದಿಯ ನಗರಕ್ಕೆ ಸುಮಾರು 49 ಜನರು ವಿಮಾನದಲ್ಲಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ತಾಂಜೇನಿಯಾದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಪ್ರೆಸಿಷನ್ ಏರ್, ಅಪಘಾತವನ್ನು ದೃಢಪಡಿಸುವ ಸಂಕ್ಷಿಪ್ತ ಹೇಳಿಕೆಯನ್ನ ಬಿಡುಗಡೆ ಮಾಡಿದೆ.