 : ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಹೊಡೆದುರುಳಿಸಿದ ಇಸ್ರೇಲ್‌ ಸೇನೆ
ಬೈರುತ್:ಲೆಬನಾನ್‌ನ ದಕ್ಷಿಣ ಬೈರುತ್‌ನಲ್ಲಿರುವ ಹೆಜ್ಬುಲ್ಲಾ()ದ ಮುಖ್ಯಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ( ) ಸಾವನ್ನಪ್ಪಿದ್ದಾನೆ. ಈ ಬಗ್ಗೆ ಇಂದು (ಸೆಪ್ಟೆಂಬರ್‌ 28) ಇಸ್ರೇಲ್‌ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ.
ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್‌ ಸೇನೆಯ ವಕ್ತಾರರಾದ ಲೆಫ್ಟಿನೆಂಟ್ ಕರ್ನಲ್ ನಾಡವ್ ಶೋಶಾನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘೋಷಿಸಿದ್ದಾರೆ. ಜತೆಗೆ ಕ್ಯಾಪ್ಟನ್ ಡೇವಿಡ್ ಅವ್ರಹಾಮ್ ಕೂಡ ಇದನ್ನು ದೃಢಪಡಿಸಿದ್ದಾರೆ. ಶುಕ್ರವಾರ ಲೆಬನಾನ್‌ ರಾಜಧಾನಿ ಬೈರುತ್‌ನಲ್ಲಿ ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಹತನಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
          .
ಇಸ್ರೇಲ್ ಡಿಫೆನ್ಸ್ ಫೋರ್ಸ್ (  -) ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ” ಎಂದು ಪೋಸ್ಟ್ ಮಾಡಿದೆ.
ಯಾರು ಈ ಹಸನ್ ನಸ್ರಲ್ಲಾ?
ಹಸನ್ ನಸ್ರಲ್ಲಾ ಫೆಬ್ರವರಿ 1992ರಿಂದ ಹೆಜ್ಬುಲ್ಲಾದ ಮಿಲಿಟರಿ ಗುಂಪನ್ನು ಮುನ್ನಡೆಸುತ್ತಿದ್ದಾನೆ. ಈತ ಗುಂಪಿನ ಮೂರನೇ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇಸ್ರೇಲ್‌ ಸೈನಿಕರಿಂದ ಕೊಲ್ಲಲ್ಪಟ್ಟ ಅಬ್ಬಾಸ್ ಅಲ್-ಮುಸಾವಿಯ ಉತ್ತರಾಧಿಕಾರಿಯಾಗಿದ್ದಾನೆ. 64 ವರ್ಷದ ಈತ ಬಡ ದಿನಸಿ ವ್ಯಾಪಾರಿಯೊಬ್ಬನ ಮಗ. ನಸ್ರಲ್ಲಾ 1960ರ ಆಗಸ್ಟ್ 31ರಂದು ಬೈರುತ್‌ನ ಉತ್ತರ ಬುರ್ಜ್ ಹಮ್ಮದ್ ಉಪನಗರದಲ್ಲಿ ಜನಿಸಿದ್ದ. ಆತನಿಗೆ 8 ಮಂದಿ ಒಡಹುಟ್ಟಿದವರು ಮತ್ತು 4 ಮಂದಿ ಮಕ್ಕಳಿದ್ದಾರೆ. ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬನಾದ ಹಸನ್ ನಸ್ರಲ್ಲಾ 2006ರಲ್ಲಿ ಇಸ್ರೇಲ್ ಜತೆಗಿನ ಯುದ್ಧದ ನಂತರ ತಲೆಮರೆಸಿಕೊಂಡಿದ್ದ. 1992ರಲ್ಲಿ ಹೆಜ್ಬುಲ್ಲಾದ ಕಮಾಂಡ್ ಆದಾಗಿನಿಂದ ನಸ್ರಲ್ಲಾ ಸಂಘಟನೆಯನ್ನು ಶಕ್ತಗೊಳಿಸಿದ್ದ.
ಮಗಳು ಕೂಡ ಸಾವು
ವಿಸೇಷ ಎಂದರೆ ಶುಕ್ರವಾರದ ದಾಳಿಯಲ್ಲಿ ಹಸನ್ ನಸ್ರಲ್ಲಾನ ಮಗಳು ಝೈನಬ್ ನಸ್ರಲ್ಲಾ ( ) ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಜ್ಬುಲ್ಲಾ ಅಥವಾ ಲೆಬನಾನ್ ಅಧಿಕಾರಿಗಳ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ ಇಸ್ರೇಲ್‌ನ ಚಾನೆಲ್ 12 ಆಕೆಯ ಸಾವಿನ ಬಗ್ಗೆ ವರದಿ ಮಾಡಿದೆ. ಹೆಜ್ಬುಲ್ಲಾ ಸಂಘಟನೆಗೆ ಬೆಂಬಲ ನೀಡುತ್ತಿದ್ದ ಝೈನಬ್ ನಸ್ರಲ್ಲಾ 1997ರಲ್ಲಿ ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ತನ್ನ ಸಹೋದರ ಹಾದಿಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದರು ಎಂದು ಜೆರುಸಲೇಂ ಪೋಸ್ಟ್‌ ವರದಿ ಮಾಡಿದೆ.
2022ರಲ್ಲಿ ಅಲ್-ಮನಾರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಝೈನಬ್ ನಸ್ರಲ್ಲಾ ತಮ್ಮ ಸಹೋದರ ಸಾವಿನ ಬಗ್ಗೆ ಪ್ರಸ್ತಾಪಿಸಿದ್ದರು.”ನನ್ನ ಸಹೋದರ ಹಾದಿ ‘ಹುತಾತ್ಮನಾದಾಗ’ ಪೋಷಕರು ಒಂದೇ ಒಂದು ಕಣ್ಣೀರು ಸುರಿಸಲಿಲ್ಲʼʼ ಎಂದು ಹೇಳಿದ್ದರು. ಪ್ರಾಣ ತ್ಯಾಗ ಮಾಡಿದ ಹಾದಿ ಬಗ್ಗೆ ಅವರ ಕುಟುಂಬ ಹೆಮ್ಮೆ ಹೊಂದಿತ್ತು ಎಂದು ತಿಳಿಸಿದ್ದರು. ತಂದೆ-ಮಗಳ ಸಾವು ದೃಢಪಟ್ಟರೆ ಇದು ಹೆಜ್ಬುಲ್ಲಾ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: : ಇಸ್ರೇಲ್‌ ದಾಳಿಗೆ ಹೆಜ್ಬುಲ್ಲಾ ತತ್ತರ; ಪ್ರಮುಖ ನಾಯಕ ಹಸನ್ ನಸ್ರಲ್ಲಾ ಪುತ್ರಿ ಝೈನಬ್ ನಸ್ರಲ್ಲಾ ಸಾವು?