ನೆಗ್ಲೇರಿಯಾ ಫೌಲೆರಿ ಸೋಂಕು: ಓರ್ವ ಬಲಿ
ಸಿಯೋಲ್:ನೆಗ್ಲೇರಿಯಾ ಫೌಲೆರಿ ಅಥವಾ ‘ಮೆದುಳು ತಿನ್ನುವ ಅಮೀಬಾ’ ದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಥೈಲ್ಯಾಂಡಿನಿಂದ ಹಿಂದಿರುಗಿದ ನಂತರ ಸಾವನ್ನಪ್ಪಿದ ಕೊರಿಯಾದ ಪ್ರಜೆಗೆ ನೈಗ್ಲೇರಿಯಾ ಫೌಲೆರಿ ಸೋಂಕು ತಗುಲಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ ದೃಢಪಡಿಸಿದೆ.
ವ್ಯಕ್ತಿ ನಾಲ್ಕು ತಿಂಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರದಲ್ಲಿ ತಂಗಿದ್ದ ನಂತರ ಡಿಸೆಂಬರ್ 10 ರಂದು ಕೊರಿಯಾಕ್ಕೆ ಮರಳಿದರು. ಮರುದಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕಳೆದ ವಾರ ಮಂಗಳವಾರ ನಿಧನರಾದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ವರದಿಯಾದ ಮೊದಲ ಸೋಂಕು ಇದಾಗಿದೆ. ಇದು 1937 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ಬಾರಿಗೆ ವರದಿಯಾಯಿತು.
ನೇಗ್ಲೇರಿಯಾ ಫೌಲೆರಿ ಎಂಬುದು ವಿಶ್ವದಾದ್ಯಂತ ಬೆಚ್ಚಗಿನ ಸಿಹಿನೀರಿನ ಸರೋವರಗಳು, ನದಿಗಳು, ಕಾಲುವೆಗಳು ಮತ್ತು ಕೊಳಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಅಮೀಬಾವಾಗಿದೆ. ಅಮೀಬಾವನ್ನು ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ.
ಅಮೆರಿಕ, ಭಾರತ ಮತ್ತು ಥೈಲ್ಯಾಂಡ್ ಸೇರಿದಂತೆ ವಿಶ್ವದಲ್ಲಿ 2018 ರ ವೇಳೆಗೆ ಒಟ್ಟು 381 ನೆಗ್ಲೇರಿಯಾ ಫೌಲೆರಿ ಪ್ರಕರಣಗಳು ವರದಿಯಾಗಿವೆ.
 - 