ಮಂಜಿನಿಂದಾಗಿ ಟ್ರಾಫಿಕ್ ಜಾಮ್, ಅಪಘಾತ: 17 ಮಂದಿ ಸಾವು
ಜಿಯಾಂಗ್ಸಿ:ಪೂರ್ವ ಚೀನಾದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಭಾನುವಾರ ರಸ್ತೆ ಅಪಘಾತ ಸಂಭವಿಸಿ 17 ಮಂದಿ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ.
ಮಂಜಿನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತ ಸಂಭವಿಸಿದೆ. ಅಪಘಾತ ಸಂಭ ವಿಸಿದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಾನ್ಚಾಂಗ್ ಕೌಂಟಿಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ತೋರುತ್ತದೆ.
ಮಂಜು ಮುಸುಕಿದ ವಾತಾವರಣದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವು ದರಿಂದ ವಾಹನಗಳನ್ನು ಎಚ್ಚರಿಕೆ ಯಿಂದ ಓಡಿಸಲು ಸೂಚಿಸಲಾಗಿದೆ.
ಮಂಜು ದೀಪಗಳನ್ನು ಆನ್ ಮಾಡಿ, ವೇಗ ಕಡಿಮೆ ಮಾಡಿ ಮತ್ತು ಮುಂಭಾಗದ ವಾಹನ ದಿಂದ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗುತ್ತದೆ. ಪಾದಚಾರಿಗಳಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
 - 