ಪ್ಯಾರಾಚೂಟ್‌ಗೆ ಬೆಂಕಿ ತಗುಲಿ ಇಬ್ಬರ ಸಾವು
ಮೆಕ್ಸಿಕೋ:ಮೆಕ್ಸಿಕೋ ಸಿಟಿ ಬಳಿಯ ಪ್ರಸಿದ್ಧ ಟಿಯೋಟಿಹುಕಾನ್ ಪುರಾತತ್ವ ತಾಣದ ಮೇಲೆ ಹಾರುತ್ತಿದ್ದ ಪ್ಯಾರಾಚೂಟ್‌ಗೆ ಬೆಂಕಿ ತಗುಲಿ ಇಬ್ಬರು ಸಾವನ್ನಪ್ಪಿದ್ದು, ಮಗುವಿಗೆ ಸುಟ್ಟ ಗಾಯಗಳಾಗಿವೆ.
‘ಪ್ರಯಾಣಿಕರು ಬಲೂನ್‌ನಿಂದ ಜಿಗಿದಿದ್ದಾರೆ’ ಎಂದು ಮೆಕ್ಸಿಕೋ ರಾಜ್ಯದ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದ್ದು, ಮಗುವಿಗೆ ಸುಟ್ಟ ಗಾಯಗಳಾಗಿವೆ ಎಂದು ಹೇಳಿದರು.
ಮೃತರನ್ನು 39 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ಮಗು ತೀವ್ರವಾಗಿ ಗಾಯಗೊಂಡಿದೆ ಎನ್ನಲಾಗಿದೆ. ಪ್ಯಾರಾಚೂಟ್‌ನಲ್ಲಿ ಬೇರೆ ಯಾವುದೇ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಆಕಾಶದಲ್ಲಿ ಹಾರುತ್ತಿರುವ ಪ್ಯಾರಾಚೂಟ್‌ಗೆ ಬೆಂಕಿ ತಗುಲಿರುವುದು ಸ್ಪಷ್ಟವಾಗಿ ಕಾಣುತ್ತದೆ.