ಸಿವ್ರಿಸ್‌: 4.4 ತೀವ್ರತೆಯ ಭೂಕಂಪ
ಸಿವ್ರಿಸ್ (ಟರ್ಕಿ):ಟರ್ಕಿಯ ಸಿವ್ರಿಸ್‌ನ ಪಶ್ಚಿಮ ನೈಋತ್ಯಕ್ಕೆ 11 ಕಿಮೀ ದೂರದಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.  ಸಿವ್ರಿಸ್ ಟರ್ಕಿಯ ಎಲಾಜಿಗ್ ಪ್ರಾಂತ್ಯದ ಒಂದು ಪಟ್ಟಣವಾಗಿದೆ.
ಭೂಮಿಯಿಂದ 11.2 ಕಿಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ.