ಸರ್ಬಿಯಾದಲ್ಲಿ ಗುಂಡಿನ ಮೊರೆತ: 17 ಜನರ ಸಾವು
ಬೆಲ್‌ಗ್ರೇಡ್‌ (ಸರ್ಬಿಯಾ):ಸರ್ಬಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ.
ನಗರವು ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಮ್ಲಾಡೆನೋವಾಕ್ ನಗರದಲ್ಲಿ ದಾಳಿ ನಡೆದಿದೆ. ದಾಳಿಕೋರ ಚಲಿಸುತ್ತಿದ್ದ ವಾಹನದಿಂದ ಸ್ವಯಂಚಾಲಿತ ಆಯುಧವನ್ನು ತೆಗೆದುಕೊಂಡು ಮನ ಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸರ್ಬಿಯಾದಲ್ಲಿ ಬಂದೂಕುಗಳಿಗೆ ಸಂಬಂಧಿಸಿದ ನಿಯಮಗಳು ತುಂಬಾ ಕಠಿಣವಾಗಿವೆ. ಈ ಘಟನೆಯ ಮುನ್ನಾದಿನ ಶಾಲೆಯೊಂದರಲ್ಲಿ ಭೀಕರ ಗುಂಡಿನ ದಾಳಿ ನಡೆದಿತ್ತು.