ವಾಟ್ಸ್​ಆಯಪ್​ ‘ವಾಟ್ಸ್​ಆಯಪ್​ ಚಾನಲ್ಸ್’​ ಹೊಸ ವೈಶಿಷ್ಟ್ಯ ಪರಿಚಯ
ವಾಷಿಂಗ್ಟನ್​:ಮೆಸೇಜಿಂಗ್ ಅಪ್ಲಿಕೇಶನ್  ಇದೀಗ ‘ ’ ಎಂಬ ಹೊಸ ವೈಶಿಷ್ಟ್ಯ ವನ್ನು ಪರಿಚಯಿಸಿದೆ.
ಈ ಚಾನಲ್‌ಗಳ ವೈಶಿಷ್ಟ್ಯವು ಉದ್ಯಮಿಗಳಿಗೆ ಮತ್ತು ವಿಷಯ ರಚನೆಕಾರರಿಗೆ ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಚಾನಲ್ ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು ಶೀಘ್ರದಲ್ಲೆ ಎಲ್ಲಾ ವಾಟ್ಸ್​ಆಯಪ್​​ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮೆಟಾ ಕಂಪನಿ ತಿಳಿಸಿದೆ.
ಚಾನಲ್ ವೈಶಿಷ್ಟ್ಯವು ಟೆಲಿಗ್ರಾಮ್‌ನ ಚಾನಲ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಚಾನೆಲ್ ವೈಶಿಷ್ಟ್ಯದ ಸಹಾಯದಿಂದ, ನೀವು ಆಯ್ದ  ಗುಂಪಿನಲ್ಲಿ ನಿಮ್ಮ ಸಂದೇಶಗಳನ್ನು ಪ್ರಸಾರ ಮಾಡಬಹುದಾಗಿದೆ.  ಚಾನೆಲ್ ವೈಶಿಷ್ಟ್ಯವು ಮುಖ್ಯವಾಗಿ ಕಾಲೇಜುಗಳು, ಸಂಸ್ಥೆಗಳು ಮತ್ತು ಕಂಪನಿಗಳಿಗೆ ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ.
ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನೇರವಾಗಿ ವಾಟ್ಸ್​ಆಯಪ್​​​ ನಲ್ಲಿ ಪ್ರಮುಖ ಅಪಡೇಟ್ಸ್​ ಪಡೆಯಲು ಇದು ಸುಲಭವಾದ ಮಾರ್ಗವಾಗಿದೆ. ಈ ‘ಚಾನೆಲ್’ಗಳನ್ನು ‘ಅಪ್‌ಡೇಟ್ಸ್’ ಎಂಬ ಹೊಸ ಟ್ಯಾಬ್ ಮೂಲಕ ಪರಿಚಯಿಸ ಲಾಗುತ್ತದೆ. ಈ ಚಾನಲ್‌ಗಳ ವೈಶಿಷ್ಟ್ಯದಲ್ಲಿ  ಗೌಪ್ಯತೆ ಬಗ್ಗೆಯೂ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದು ಕಂಪನಿ ಹೇಳುತ್ತದೆ.
ಆಯ್ದ ಚಾನಲ್‌ಗಳಿಂದ ನಾವು ಸ್ವೀಕರಿಸುವ ಸಂದೇಶಗಳು ಎಂಡ್ – ಟು -ಎಂಡ್ ಎನ್‌ಕ್ರಿಪ್ಶನ್ ಆಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಕಂಪನಿಯು ಖಾಸಗಿತನದ ವಿಷಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.
ಚಾನಲ್​ಗಳನ್ನು ಅನುಸರಿಸುವವರ ಫೋನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಗೌಪ್ಯವಾಗಿಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾವು ಅನುಸರಿಸುವ ಚಾನಲ್‌ಗಳು ಎಲ್ಲರಿಗೂ ಗೋಚರಿಸುತ್ತವೆ. ಆದರೆ ವಾಟ್ಸ್​ಆಯಪ್​ ಪರಿಚಯಿಸಿರುವ ಈ ಚಾನೆಲ್​ಗಳಲ್ಲಿ ನಾವು ಅನುಸರಿಸುವ ಚಾನೆಲ್​ಗಳ ವಿವರ ಬೇರೆಯವರಿಗೆ ತಿಳಿಯುವುದಿಲ್ಲ ಎಂದು ಕಂಪನಿ ಹೇಳಿದೆ.