ಜೂ.14ರಂದು ಮೊದಲ ಹಿಂದೂ-ಅಮೆರಿಕನ್ ಶೃಂಗಸಭೆ
ವಾಷಿಂಗ್ಟನ್:ಮೊದಲ ಹಿಂದೂ-ಅಮೆರಿಕನ್ ಶೃಂಗಸಭೆ ಜೂ.14ರಂದು ಯುಎಸ್ ಕಾಂಗ್ರೆಸ್’ನಲ್ಲಿ ನಡೆಯಲಿದೆ.
ಹಿಂದೂ ಸಮುದಾಯಗಳ ಕಳವಳಗಳ ಕುರಿತು ಧ್ವನಿ ಎತ್ತುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಈ ಕಾರ್ಯ ಕ್ರಮವನ್ನ ಉದ್ದೇಶಿಸಿ ಯುಎಸ್ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಮಾತನಾಡಲಿದ್ದಾರೆ.
ಮೊದಲ ಹಿಂದೂ-ಅಮೆರಿಕನ್ ಶೃಂಗಸಭೆಯ ಸಂಘಟಕರಾದ ಅಮೆರಿಕನ್ ಫಾರ್ ಹಿಂದೂ ಪೊಲಿಟಿಕಲ್ ಆಕ್ಷನ್ ಕಮಿಟಿ, ದೇಶಾದ್ಯಂತದ ಪ್ರಸಿದ್ಧ ಭಾರತೀಯ-ಅಮೆರಿಕನ್ನರ ಗುಂಪು ರಾಜಕೀಯ ಕಾರ್ಯಕ್ರಮಕ್ಕಾಗಿ ಯುಎಸ್ ಕ್ಯಾಪಿಟಲ್’ನಲ್ಲಿ ಒಟ್ಟುಗೂಡಲಿದೆ ಎಂದು ಹೇಳಿದರು.
ಫ್ಲೋರಿಡಾ, ನ್ಯೂಯಾರ್ಕ್, ಬೋಸ್ಟನ್, ಟೆಕ್ಸಾಸ್, ಚಿಕಾಗೋ ಮತ್ತು ಕ್ಯಾಲಿಫೋರ್ನಿಯಾದ ಜನರು ಸೇರಿದಂತೆ ದೇಶಾದ್ಯಂತದ ಸುಮಾರು 130 ಭಾರತೀಯ-ಅಮೆರಿಕನ್ ನಾಯಕರು ಶೃಂಗಸಭೆಗಾಗಿ ಯುಎಸ್ ಕ್ಯಾಪಿಟಲ್ನಲ್ಲಿ ಒಟ್ಟುಗೂಡಲಿದ್ದಾರೆ.
ಹೃದ್ರೋಗ ತಜ್ಞ ಡಾ.ರೊಮೇಶ್ ಜಪ್ರಾ, ಅಮೆರಿಕದ ಹಿಂದೂಗಳು ದೇಶಾದ್ಯಂತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜಕೀಯವಾಗಿ ಅವರು ಇನ್ನೂ ಹಿಂದುಳಿದಿದ್ದಾರೆ ಎಂದು ಹೇಳಿದರು. ಇನ್ನು ಈಕ್ವಾಲಿಟಿ ಲ್ಯಾಬ್ಸ್ ಮತ್ತು ಕೇರ್’ನಂತಹ ಸಂಸ್ಥೆಗಳು ಹಿಂದೂ ಧರ್ಮವನ್ನ ನಾಶಪಡಿಸಲು ಪ್ರಯತ್ನಿಸುತ್ತಿವೆ ಎಂದು ರೊಮೇಶ್ ಜಪ್ರಾ ಆರೋಪಿಸಿದರು.